ಹನುಮಂತಾಪುರದಲ್ಲಿ ಗಾಳಿಮಳೆಗೆ ಹಾರಿಹೋದ ಛಾವಣಿಯನ್ನು ಕ್ರೇನ್ ಬಳಸಿ ಮೇಲೆತ್ತುತ್ತಿರುವುದು.
- ಹಾನಿಗೀಡಾದ ಗ್ರಾಮಗಳಲ್ಲಿ ನೀರವ ಮೌನ
- 35 ಹಳ್ಳಿಗಳಲ್ಲಿ 600 ಮನೆಗಳಿಗೆ ಹಾನಿ
- ಭರದಿಂದ ಸಾಗುತ್ತಿದೆ ಸರ್ವೇ
ಹೊಳೆಹೊನ್ನೂರು: ಗಾಳಿ ಹೊಡೆತಕ್ಕೆ ಸಿಲುಕಿ ಭಾಗಶ@ ತೋಟಗಳು ನೆಲಕಚ್ಚಿರುವ ಗ್ರಾಮಗಳಲ್ಲಿ ಮೌನ ಆವರಿಸಿದೆ. ಫಸಲಿಗೆ ಬಂದ ತೋಟಗಳನ್ನು ಕಳೆದುಕೊಂಡು ಮನನೊಂದಿರುವ ಬೆಳೆಗಾರರು ಶುಭ ಸಮಾರಂಭಗಳಿಂದ ದೂರ ಉಳಿಯುತ್ತಿದ್ದಾರೆ. ಅಲ್ಲಲ್ಲಿ ಪರಿಹಾರದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಗಾಳಿ ಮಳೆಗೆ ಸಿಲುಕಿ ಹಾನಿಗೀಡಾದ 35 ಗ್ರಾಮಗಳಲ್ಲಿ ಮನೆಗಳ ಸರ್ವೇ ಕಾರ್ಯ ಸಂಪೂರ್ಣವಾಗಿದೆ. ಹೊಳೆಹೊನ್ನೂರು, ಆನವೇರಿ, ಕಲ್ಲಿಹಾಳ್ ಹೋಬಳಿ ವ್ಯಾಪ್ತಿಯ 35 ಹಳ್ಳಿಗಳಲ್ಲಿ ಬರೋಬ್ಬರಿ 600 ಮನೆಗಳಿಗೆ ಹಾನಿ ಉಂಟಾಗಿದೆ. ಮೈದೊಳಲು, ಮಲ್ಲಿಗೇನಹಳ್ಳಿ, ಅರಹತೊಳಲು ವಡ್ಡರಹಟ್ಟಿಯಲ್ಲಿ ಹೆಚ್ಚು ಮನೆಗಳಿಗೆ ಭಾಗಶ@ ಹಾನಿ ಉಂಟಾಗಿದೆ. ಮನೆಗಳ ಸರ್ವೇ ಕಾರ್ಯ ಮುಕ್ತಾಯವಾದ ಹಿನ್ನೆಲೆಯಲ್ಲಿ ನಿವಾಸಿಗಳು ಮನೆಗಳ ದುರಸ್ತಿ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ. ಮರಳು, ಜಲ್ಲಿ, ಸಿಮೆಂಟ್ ಸೇರಿ ದುರಸ್ತಿಗೆ ಬೇಕಾದ ಸಾಮಗ್ರಿ ಜೋಡಿಸುತ್ತಿದ್ದಾರೆ. ಕಾಳಜಿ ಕೇಂದ್ರಗಳನ್ನು ಬಂದ್ ಮಾಡಲಾಗಿದೆ.
ಇದೀಗ ಅಡಿಕೆ ತೋಟಗಳಲ್ಲಿ ಬಿದ್ದ ಮರಗಳ ಸರ್ವೇ ಕಾರ್ಯ ಭರದಿಂದ ಸಾಗುತ್ತಿದೆ. ಅಧಿಕಾರಿಗಳ ತಂಡ ವರದಿ ಸಿದ್ಧಪಡಿಸುತ್ತಿದೆ. ತೋಟಗಳಲ್ಲಿ ಬಿದ್ದ ತೆಂಗಿನ ಮರಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಕೇವಲ ಅಡಿಕೆ ಮರಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತಿದ್ದಾರೆ. ತೋಟದಲ್ಲಿ ಬಿದ್ದಿರುವ ತೆಂಗು, ಸಾಗುವಾನಿ, ತೇಗ, ಬಾಳೆ ಬೆಳೆಯನ್ನು ಅಧಿಕಾರಿಗಳು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮೀೆಗೆ ಅಡ್ಡಿಯಾದ ಗಾಳಿ ಸುದ್ದಿ:
ಅಡಿಕೆ ಮರವೊಂದಕ್ಕೆ 16 ರೂ. ಪರಿಹಾರ ನೀಡುತ್ತಾರೆಂದು ಗಾಳಿ ಸುದ್ದಿ ಹರಡಿರುವುದರಿಂದ ಸರ್ವೇ ಕಾರ್ಯಕ್ಕೆ ಬಹುತೇಕ ರೈತರು ಸಹಕಾರ ನೀಡುತ್ತಿಲ್ಲ. ಬಹುತೇಕ ಹಳ್ಳಿಗಳಲ್ಲಿ ಬೆಳೆಗಾರರು ಬೇಸರದಿಂದ ತೋಟದ ಕಡೆ ಹೋಗುತ್ತಿಲ್ಲ. ಗ್ರಾಮ ಸಹಾಯಕರು ಸರ್ವೇಗೆ ತೋಟಕ್ಕೆ ಬರುವಂತೆ ಕರೆದರೂ ಬಾರದೆ ಬಿದ್ದಿರುವ ಮರಗಳನ್ನು ನೀವೇ ಲೆಕ್ಕಮಾಡಿಕೊಂಡು ಹೋಗಿ ಎನ್ನುತ್ತಿದ್ದಾರೆ ಬೆಳೆಗಾರರು. ತೋಟಗಳಲ್ಲಿ ಬಿದ್ದ ಅಡಿಕೆ ಮರಗಳನ್ನು ಕೊಯ್ಯುವುದಕ್ಕೆ ಮರವೊಂದಕ್ಕೆ 80&100 ರೂಪಾಯಿ ನಿಗದಿ ಮಾಡಲಾಗಿದೆ. ಬಿದ್ದ ಮರ ಕತ್ತರಿಸಲು ದುಬಾರಿ ಹಣ ನೀಡುವ ಬದಲಿಗೆ 4&5 ಜನ ಬೆಳೆಗಾರರು ಒಟ್ಟಾಗಿ ಹಣ ಹೊಂದಿಸಿಕೊಂಡು ಮರ ಕೊಯ್ಯುವ ಯಂತ್ರ ಖರೀದಿಗೆ ಮುಂದಾಗಿದ್ದಾರೆ. ಕೆಲವು ರೈತರು ಸರ್ವೇ ಕಾರ್ಯಕ್ಕೂ ಮೊದಲೇ ಮರಗಳನ್ನು ತೆರವುಗೊಳಿಸಿ ತೋಟವನ್ನು ಸ್ವಚ್ಛಮಾಡುತ್ತಿದ್ದಾರೆ.
ಬೆಳೆಗಾರರು ಹೆಚ್ಚಾಗಿ ವ್ಯಾಪಾರ ವಹಿವಾಟು ನಡೆಸುವ ಸ್ಥಳಿಯ ಸಹಕಾರ ಸಂಗಳು ಬೆಳೆಗಾರರ ರಕ್ಷಣೆಗೆ ಧಾವಿಸಬೇಕು ಎಂಬುದು ಕೆಲ ಬೆಳೆಗಾರರ ಒತ್ತಾಯ. ಭದ್ರಾವತಿಯ ಮ್ಯಾಮ್ಕೋಸ್ ಆಡಳಿತ ಮಂಡಳಿ ಮಲ್ಲಿಗೇಹಳ್ಳಿ ಹಾಗೂ ಹನುಮಂತಾಪುರ ಗ್ರಾಮದಲ್ಲಿ ಹಾನಿಗೊಳಗಾದ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾನಿಗೊಳಗಾದ 35 ಗ್ರಾಮಗಳ ತೋಟಗಳ ಸರ್ವೇ ಕಾರ್ಯ ಪೂರ್ಣವಾಗಲು ಒಂದು ವಾರ ಬೇಕಾಗಬಹುದು. ಹಳ್ಳಿಗಳ ವ್ಯಾಪ್ತಿಯ ಮದುವೆ, ನಾಮಕರಣ ಮತ್ತಿತರ ಶುಭ ಸಮಾರಂಭಗಳು ಜನರಿಲ್ಲದೆ ಬೀಕೋ ಎನ್ನುತ್ತಿವೆ. ಜಮೀನುಗಳ ಸಂಪರ್ಕ ಸರಿಪಡಿಸುವಲ್ಲಿ ಮೆಸ್ಕಾಂ ಸಿಬ್ಬಂದಿ ನಿರತರಾಗಿದ್ದಾರೆ. ಈ ಬಾರಿ ಖೇಣಿ ವ್ಯವಹಾರಕ್ಕೂ ಹಿನ್ನಡೆಯಾಗುವ ಸಾಧ್ಯತೆಯಿದೆ. ತೋಟದ ಆದಾಯ ನೆಚ್ಚಿ ಸಾಲ ಮಾಡಿದವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ತೋಟ ಕಳೆದುಕೊಂಡಿರುವ ಸಂದ ಷೇರುದಾರರಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಮಾತುಕತೆ ನಡೆದಿದೆ. ಆಡಳಿತ ಮಂಡಳಿಯ ಒಮ್ಮತದ ತೀರ್ಮಾನದಂತೆ ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರಲಾಗುವುದು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬೆಳೆಗಾರರಿಗೆ ಅನುಕೂಲವಾಗುವಂತೆ ಪರಿಹಾರ ೂಷಿಸಬೇಕು.
ಮ್ಯಾಮ್ಕೋಸ್ ನಿರ್ದೇಶಕ, ಗುಡುಮಗಟ್ಟೆ