ಭದ್ರಾವತಿ ಹೊರವಲಯದ ಎಚ್.ಕೆ.ಜಂಕ್ಷನ್ ಬಳಿ ಲಾರಿ ಹಿಂಬದಿ ಚಕ್ರಕ್ಕೆ ಬೈಕ್ ಸಿಲುಕಿ ನಜ್ಜುಗುಜ್ಜಾಗಿರುವುದು. 
ಶಿವಮೊಗ್ಗ

ಲಾರಿ ಚಕ್ರಕ್ಕೆ ಸಿಲುಕಿ ದಂಪತಿ ಸಾವು | Lorry bike accident

ಪ್ರಮುಖ ಮುಖ್ಯಾಂಶಗಳು

  • ಭದ್ರಾವತಿ ಎಚ್.ಕೆ.ಜಂಕ್ಷನ್ ಬಳಿ ಭಾನುವಾರ ರಾತ್ರಿ ಘಟನೆ
  • ತರೀಕೆರೆ ಗೌಳಿಕ್ಯಾಂಪ್‌ನ ಬಾಬು ಮತ್ತು ಸಾವಿತ್ರಿ ಮೃತರು
  • ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು
ಶಿವಮೊಗ್ಗ: ಭದ್ರಾವತಿ ಹೊರವಲಯದ ಎಚ್.ಕೆ.ಜಂಕ್ಷನ್(HK Junction) ಬಳಿ ಭಾನುವಾರ ರಾತ್ರಿ ಜೋಳ ತುಂಬಿದ್ದ ಲಾರಿಯ ಹಿಂಬದಿ ಚಕ್ರಕ್ಕೆ ಸಿಲುಕಿ ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿ ಮೃತಪಟ್ಟಿದ್ದಾರೆ.
ತರೀಕೆರೆ ತಾಲೂಕಿನ ಬರಗೇನಹಳ್ಳಿ ಗೌಳಿಕ್ಯಾಂಪ್‌(Gaulicamp)ನ ಬಾಬು(37) ಮತ್ತು ಅವರ ಪತ್ನಿ ಸಾವಿತ್ರಿ(30) ಮೃತರು. ಸಾವಿತ್ರಿ ಅವರು ಶಿವಮೊಗ್ಗದ ಪಾಸ್‌ಪೋರ್ಟ್ ಕಚೇರಿಯಲ್ಲಿ ಹೌಸ್‌ಕೀಪಿಂಗ್ ಆಗಿದ್ದು, ಪತಿ ಬಾಬು ಶಿವಮೊಗ್ಗದ ಫುಡ್‌ಕೋರ್ಟ್‌(Food court)ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಭಾನುವಾರ ರಾತ್ರಿ ತರೀಕೆರೆ ತಾಲೂಕು ಬರಗೇನಹಳ್ಳಿ ಗೌಳಿ ಕ್ಯಾಂಪ್‌ಗೆ ತೆರಳುವಾಗ ಎಚ್.ಕೆ.ಜಂಕ್ಷನ್ ಬಳಿ ಮೆಕ್ಕೆಜೋಳ(Maize) ಲೋಡ್ ಆಗಿದ್ದ ಲಾರಿ ಮುಂದೆ ಚಲಿಸಲಾಗದೆ ಚಾಲಕನ ನಿಯಂತ್ರಣ ಕಳೆದುಕೊಂಡು ಹಿಮ್ಮುಖವಾಗಿ ಬರುತ್ತಿತ್ತು. ಏಕಾಏಕಿ ಲಾರಿ ಬೈಕ್ ಮೇಲೆ ಹತ್ತಿದ್ದರಿಂದ ಬಾಬು ಅವರು ಸ್ಥಳದಲ್ಲೇ ಮೃತಪಟ್ಟರೆ, ಸಾವಿತ್ರಿ ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.