ನಿಟ್ಟೂರಿನ ಡಾ. ಶಾಂತರಾಮಪ್ರಭು ಮನೆಯಲ್ಲಿ ಮನೆಗೊಂದು ಗ್ರಂಥಾಲಯವನ್ನು ಸಾಹಿತಿ ಅಂಬ್ರಯ್ಯಮಠ ಉದ್ಘಾಟಿಸಿದರು. ಡಾ. ಮಾಷರ್ಲ್ ಶರಾಂ, ಹನಿಯಾ ರವಿ, ಲಕ್ಷ್ಮೀನಾರಾಯಣ, ನಾರಾಯಣ ಕಾಮತ್, ಸುಜಾತಾ ಪ್ರಭು ಇತರರಿದ್ದರು.
ಹೊಸನಗರ: ಪುಸ್ತಕ ಸಂಗ್ರಹ ಸಾಧಾರಣ ವಿಷಯವಲ್ಲ. ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಪರಿಸರ ಮತ್ತು ಬದುಕಿಗೆ ಪೂರಕ ಮತ್ತು ಪ್ರೇರಕವಾದ ಗ್ರಂಥಗಳ ಸಂಗ್ರಹ ಉತ್ತಮ ಹವ್ಯಾಸ ಎಂದು ಸಾಹಿತಿ ಅಂಬ್ರಯ್ಯಮಠ ಹೇಳಿದರು.
ಹೊಸನಗರ ತಾಲೂಕು ಕಸಾಪ ಮತ್ತು ಬೆಂಗಳೂರು ಪುಸ್ತಕ ಪ್ರಾಧಿಕಾರ ಆಶ್ರಯದಲ್ಲಿ ನಿಟ್ಟೂರು ಗ್ರಾಮದಲ್ಲಿ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಂತರಾಮಪ್ರಭು ಅವರ ಮನೆ ಅದ್ಭುತ ಪುಸ್ತಕಗಳ ಭಂಡಾರ. ಇವರ ಪುಸ್ತಕಗಳ ಸಂಗ್ರಹ ಇತರರಿಗೆ ಮಾದರಿ. ಅವರು ಕೇವಲ ಸಂಗ್ರಹ ಮಾಡದೆ ಪುಸ್ತಕಗಳ ಸಮಗ್ರ ಅಧ್ಯಯನ ಮಾಡಿದ್ದಾರೆ. ಗ್ರಂಥಾಲಯದಂತ ಅವರ ಮನೆ ನೋಡಿದರೆ ಓಶೋ ನೆನಪಾಗುತ್ತಾರೆ. ಶಾಂತರಾಮಪ್ರಭು ಪುಸ್ತಕ ಸಂಗ್ರಹ ಅಸಾಧಾರಣ. ಇದಕ್ಕೆ ಸರ್ಕಾರ, ಅಕಾಡೆಮಿಯಿಂದ ಗೌರವ ಸಿಗುವಂತೆ ಸರ್ಕಾರಕ್ಕೆ ಶಿಾರಸು ಮಾಡಬೇಕು ಎಂದು ಮನವಿ ಮಾಡಿದರು.
ಶಾಂತರಾಮಪ್ರಭು ಮಾತನಾಡಿ, ಬಾಲ್ಯದಿಂದಲೂ ವಾರಪತ್ರಿಕೆ, ಮಾಸಪತ್ರಿಕೆ, ದಿನಪತ್ರಿಕೆಗಳ ಸಂಗ್ರಹಿಸುವ ಹವ್ಯಾಸ ನನ್ನದು. ನನಗೆ ಪುಸ್ತಕ ಸಂಗ್ರಹಕ್ಕೆ ಕುಟುಂಬದಿಂದ ಮತ್ತು ಆರ್ಥಿಕವಾಗಿ ಯಾವುದೇ ತೊಂದರೆ ಅಗಿಲ್ಲ ಎಂದರು.
ಡಾ. ಮಾಷರ್ಲ್ ಶರಾಂ, ಹನಿಯಾ ರವಿ, ಲಕ್ಷ್ಮೀನಾರಾಯಣ ದೊಡ್ಮನೆ, ನಾರಾಯಣ ಕಾಮತ್, ಕೆ.ಜಿ.ನಾಗೇಶ್, ಅಶ್ವಿನಿ ಪಂಡಿತ್, ಸುಜಾತಾ ಪ್ರಭು, ಜಿ.ಎನ್.ಬಸಪ್ಪ ಗೌಡ, ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಭಟ್, ಕುಮಾರಸ್ವಾಮಿ ಉಪಸ್ಥಿತರಿದ್ದರು