ಶಿವಮೊಗ್ಗ ಸೈಬರ್ ಠಾಣೆ 
ಶಿವಮೊಗ್ಗ

ಆನ್‌ಲೈನ್ ಟ್ರೇಡಿಂಗ್‌ ಹೆಸರಲ್ಲಿ 9.91 ಲಕ್ಷ ರೂ. ವಂಚನೆ | Online trading

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನ ಕಂಪನಿ ಹೆಸರಲ್ಲಿ ಹೂಡಿಕೆ ಮಾಡಿ ಅಧಿಕ ಲಾಭಾಂಶದ ಆಸೆ
  • ಶಿವಮೊಗ್ಗ ನವುಲೆ ಗ್ರಾಮದ ರೈತನಿಗೆ ಅಪರಿಚಿತನಿಂದ ವಂಚನೆ
  • ಮಾ.20ರಿಂದ ಮೇ 15ರವರೆಗೆ 4 ಹಂತದಲ್ಲಿ 9,91,081 ರೂ. ವರ್ಗಾವಣೆ
ಶಿವಮೊಗ್ಗ: ಬೆಂಗಳೂರಿನ ಪ್ರತಿಷ್ಠಿತ ಕಂಪನಿ ಟ್ರೇಡಿಂಗ್‌(trading)ನಲ್ಲಿ ಹೂಡಿಕೆ ಮಾಡಿ ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿ ಶಿವಮೊಗ್ಗ ನವುಲೆ ಗ್ರಾಮದ ರೈತನಿಗೆ ಅಪರಿಚಿತನೊಬ್ಬ 9.91 ಲಕ್ಷ ರೂ. ವಂಚನೆ(scam) ಮಾಡಿದ್ದಾನೆ.
36 ವರ್ಷದ ರೈತ ಮಾ.12ರಂದು ಮೊಬೈಲ್ ನೋಡುತ್ತಿದ್ದಾಗ ವಿಐಪಿ ಎಂಬ ನಲ್ಲಿ ವಾಟ್ಸ್‌ಆ್ಯಪ್ ಗ್ರೂಪ್‌(Whats app group)ಗೆ ಜಾಯಿನ್ ಆಗಿರುವ ಬಗ್ಗೆ ನೋಟಿಫಿಕೇಶನ್ ಬಂದಿತ್ತು. ಅದನ್ನು ತೆರೆದು ನೋಡಿದಾಗ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಲಾಭಾಂಶ ನೀಡುವುದಾಗಿ ಅಪರಿಚಿತ ನಂಬಿಸಿದ್ದರು.
ಆ ಬಳಿಕ ರೈತ(farmer) ಮಾ.20ರಿಂದ ಮೇ 15ರವರೆಗೆ ನಾಲ್ಕು ಹಂತದಲ್ಲಿ 9,91,081 ರೂ. ಅನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದ. ಬಳಿಕ ರೈತ ಹಣ ವಿತ್ ಡ್ರಾ ಮಾಡಲು ಮುಂದಾದಾಗ ಶೇ.20ರಷ್ಟು ಹಣವನ್ನು ಕೊಟ್ಟರೆ ಮಾತ್ರ ವಿತ್ ಡ್ರಾ ಮಾಡಲು ಅವಕಾಶ ಕಲ್ಪಿಸುವುದಾಗಿ ಹೇಳಿದ್ದ. ಹಣ ಡ್ರಾ ಮಾಡಿಕೊಳ್ಳಲು ಅವಕಾಶ ಕೊಟ್ಟರೆ ಅದರಲ್ಲೇ ಶೇ.20ರಷ್ಟು ಹಣ ನೀಡುವುದಾಗಿ ರೈತ ಹೇಳಿದ್ದ. ಅದಾದ ಬಳಿಕ ವೆಬ್‌ಪೇಜ್ ಕ್ಲೋಸ್(webpage Close)ಆಗಿತ್ತು. ಅನುಮಾನಗೊಂಡು ಬೆಂಗಳೂರಿನಲ್ಲಿರುವ ಖಾಸಗಿ ಕಂಪನಿಗೆ ಕರೆ ಮಾಹಿತಿ ವಿಚಾರಿಸಿದಾಗ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ರೈತ ಶಿವಮೊಗ್ಗ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.