ಶಿರಾಳಕೊಪ್ಪದ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಎಸ್‌ಐ ಪ್ರಶಾಂತ್ ಉದ್ಘಾಟಿಸಿದರು. ಹಾಲೇಶಪ್ಪ, ನಿಸರ್ಗಾ ಅರುಣ್, ರಮ್ಯಾ ಸತೀಶ್ ಇತರರಿದ್ದರು. 
ಶಿವಮೊಗ್ಗ

65 ಯೂನಿಟ್ ರಕ್ತ ಸಂಗ್ರಹ

ಶಿರಾಳಕೊಪ್ಪ: ಪಟ್ಟಣದಲ್ಲಿ ಪೊಲೀಸ್ ಠಾಣೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ 65ಕ್ಕೂ ಹೆಚ್ಚು ಮಂದಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು.
55 ಬಾರಿ ರಕ್ತದಾನ ಮಾಡಿದ ಸಿವಿಲ್ ಹೆಡ್ ಕಾನ್ಸ್‌ಟೇಬಲ್ ಹಾಲೇಶಪ್ಪ ಮಾತನಾಡಿ, ಜಿಲ್ಲಾ ಪೊಲೀಸ್ ಇಲಾಖೆ ಈಗಾಗಲೇ 80 ರಕ್ತದಾನ ಶಿಬಿರ ಆಯೋಜಿಸಿದ್ದು ಮಾರ್ಚ್‌ನೊಳಗೆ 100 ರಕ್ತದಾನ ಶಿಬಿರ ನಡೆಸುವ ಗುರಿ ಇದೆ. ರಕ್ತದಾನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ರಕ್ತದಾನ ಶಿಬಿರ ಆಯೋಜಿಸುವುದರಲ್ಲಿ ಪೊಲೀಸ್ ಇಲಾಖೆ ವಿಶೇಷ ಸೇವೆ ಸಲ್ಲಿಸುತ್ತಿದೆ ಎಂದು ತಿಳಿಸಿದರು.
ಎಸ್‌ಐ ಪ್ರಶಾಂತ್, ನಿಸರ್ಗಾ ಅರುಣ್, ರಮ್ಯಾ ಸತೀಶ್, ಮೆಗ್ಗಾನ್ ರಕ್ತ ಸಂಗ್ರಹಣಾ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.