ಶಿವಮೊಗ್ಗದಲ್ಲಿ ಪರ್ಯಾವರಣ ಟ್ರಸ್ಟ್ ಅಧ್ಯಕ್ಷ ಪ್ರೊ. ಬಿ.ಎಂ.ಕುಮಾರಸ್ವಾಮಿ ಮಾತನಾಡಿದರು. ಪ್ರೊ. ಎಲ್.ಕೆ.ಶ್ರೀಪತಿ, ಎಂ.ಶಂಕರ್, ಗಿರೀಶ್ ಪಟೇಲ್, ರಮೇಶ್ ಹೆಗ್ಡೆ, ತ್ಯಾಗರಾಜ್ ಮಿತ್ಯಾಂತ, ದಿನೇಶ್ ಶೇಟ್ ಸುದ್ದಿಗೋಷ್ಠಿಯಲ್ಲಿದ್ದರು. 
ಶಿವಮೊಗ್ಗ

27ರಿಂದ ನಿರ್ಮಲ ತುಂಗಭದ್ರಾ ಅಭಿಯಾನದ 3ನೇ ಹಂತದ ಪಾದಯಾತ್ರೆ । Tungabhadra Campaign

ಪ್ರಮುಖ ಮುಖ್ಯಾಂಶಗಳು

  • ಗಂಗಾವತಿಯ ಕಿಷ್ಕಿಂಧೆಯಿಂದ ಆಂಧ್ರಪ್ರದೇಶದ ಮಂತ್ರಾಲಯದವರೆಗೆ ಪಾದಯಾತ್ರೆ
  • ತುಂಗಭದ್ರಾ ನದಿಗಳ ಸ್ವಚ್ಛತೆ ಕುರಿತು ಮೂರನೇ ಹಂತದ ಜಾಗೃತಿ ಅಭಿಯಾನ
  • ಶಿವಮೊಗ್ಗದಲ್ಲಿ ಪರ್ಯಾವರಣ ಟ್ರಸ್ಟ್ ಅಧ್ಯಕ್ಷ ಪ್ರೊ. ಬಿ.ಎಂ.ಕುಮಾರಸ್ವಾಮಿ ಹೇಳಿಕೆ
ಶಿವಮೊಗ್ಗ: ನಿರ್ಮಲ ತುಂಗಭದ್ರಾ ಅಭಿಯಾನ(Campaign)ದ ಮೂರನೇ ಹಂತದ ಪಾದಯಾತ್ರೆಯನ್ನು ಗಂಗಾವತಿಯ ಕಿಷ್ಕಿಂಧೆಯಿಂದ ಆಂಧ್ರಪ್ರದೇಶದ ಮಂತ್ರಾಲಯ(Mantralaya)ದವರೆಗೆ ಡಿ.27ರಿಂದ ಜನವರಿ 4ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಪರ್ಯಾವರಣ ಟ್ರಸ್ಟ್ ಅಧ್ಯಕ್ಷ ಪ್ರೊ. ಬಿ.ಎಂ.ಕುಮಾರಸ್ವಾಮಿ ಹೇಳಿದರು.
ನವದೆಹಲಿ(New delhi)ಯ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ನಿರ್ಮಲ ತುಂಗಾಭದ್ರಾ(Tungabhadra) ಅಭಿಯಾನದ ಸಹಯೋಗದಲ್ಲಿ ತುಂಗಭದ್ರಾ ನದಿಗಳ ಸ್ವಚ್ಛತೆ ಕುರಿತು ಮೂರನೇ ಹಂತದ ಜಾಗೃತಿ ಅಭಿಯಾನ ಇದಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಾದಯಾತ್ರೆಗೆ ಡಿ.27ರಂದು ಬೆಳಗ್ಗೆ 7.30ಕ್ಕೆ ಗಂಗಾವತಿಯ ಹಿರೇಜಂತಕಲ್‌ನಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸ್(Netaji Subhash Chandra Bose) ಅವರ ಮೊಮ್ಮಗಳು ರಾಜೇಶ್ವರಿ ಚೌಧರಿ ಅವರು ಚಾಲನೆ ನೀಡುವರು. ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸುವರು. ಜನವರಿ 4ರಂದು ಪಾದಯಾತ್ರೆ ಮಂತ್ರಾಲಯ ತಲುಪಲಿದ್ದು, ಸಂಜೆ 4ಕ್ಕೆ ಸಮಾರೋಪ ಸಮಾರಂಭದ ಸಾನ್ನಿಧ್ಯವನ್ನು ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿ ವಹಿಸುವರು. ಉಳಿದಂತೆ ಪರಿಸರ ತಜ್ಞರು, ಹಾಲಿ ಮತ್ತು ಮಾಜಿ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿರುವರು ಎಂದು ಹೇಳಿದರು.
ಪ್ರಮುಖವಾಗಿ ಗಂಗಾವತಿ, ಕಂಪ್ಲಿ, ಶಿರಗುಪ್ಪ, ಕಾರಟಗಿ, ಸಿಂಧನೂರು. ಮಾನ್ವಿ, ಶಿರವಾರ, ಮಂತ್ರಾಲಯ ಪಟ್ಟಣಗಳಲ್ಲಿ ವಿಶೇಷ ಸಭೆ ನಡೆಯಲಿದೆ. ಕಳೆದೆರಡು ತಿಂಗಳಿಂದ ಈ ಭಾಗದಲ್ಲಿ ಜನಸಂಪರ್ಕ ಸಭೆ ನಡೆಯುತ್ತಿದ್ದು, 60ಕ್ಕೂ ಹೆಚ್ಚು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಅರಿವು ಮೂಡಿಸಲಾಗಿದೆ. ಅನೇಕ ಸಂಘ ಸಂಸ್ಥೆಗಳು ಪಾದಯಾತ್ರೆಗೆ ಕೈಜೋಡಿಸುತ್ತಿವೆ ಎಂದರು.
ಸ್ಥಳೀಯರು ತುಂಗಭದ್ರಾ ನದಿ ನೀರು ಕಲುಷಿತವಾಗಿರುವ ಬಗ್ಗೆ ಜಾಗೃತರಾಗುತ್ತಿದ್ದು, ಅದಕ್ಕೆ ಪರಿಹಾರ ಕಂಡುಕೊಳ್ಳಬೇಕೆಂದು ಅಭಿಯಾನಕ್ಕೆ ಕೈಜೋಡಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಜಲಜಾಗೃತಿ ಜನಜಾಗೃತಿ ಪಾದಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಶಿವಮೊಗ್ಗ ಜಿಲ್ಲೆಯಿಂದ ನೂರಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದು, ದಕ್ಷಿಣ ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಅಭಿಯಾನದ ಪ್ರಮುಖ ಲೋಕೇಶ್ವರಪ್ಪ ಮಾತನಾಡಿ, 3ನೇ ಹಂತದ ಅಭಿಯಾನವು ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳಲ್ಲಿರುವ 9 ತಾಲೂಕುಗಳ ಮೂಲಕ ಈ ಮೂರನೇ ಹಂತದ ಪಾದಯಾತ್ರೆ ನಡೆಯಲಿದೆ. ರಾಜಸ್ಥಾನದ ಜಲತಜ್ಞ ರಾಜೇಂದ್ರಸಿಂಗ್,ಕಲ್ಯಾಣ ಕರ್ನಾಟಕದ ರಾಜಮಾತೆ ಲಲಿತಾರಾಣಿ, ಗದಗದ ಮಾಜಿ ಶಾಸಕ ಡಿ.ಆರ್.ಪಾಟೀಲ್ ಮೊದಲಾದ ಗಣ್ಯರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಸಾರ್ವಜನಿಕರಲ್ಲಿ ಜಲಮಾಲಿನ್ಯದಿಂದ ಉಂಟಾಗುತ್ತಿರುವ ಅಪಾಯದ ಬಗ್ಗೆ ಅರಿವು ಮೂಡಿಸಲಿದ್ದಾರೆ ಎಂದರು. ಪ್ರೊ. ಎಲ್.ಕೆ.ಶ್ರೀಪತಿ, ಎಂ.ಶಂಕರ್, ಗಿರೀಶ್ ಪಟೇಲ್, ರಮೇಶ್ ಹೆಗ್ಡೆ, ತ್ಯಾಗರಾಜ್ ಮಿತ್ಯಾಂತ, ದಿನೇಶ್ ಶೇಟ್ ಸುದ್ದಿಗೋಷ್ಠಿಯಲ್ಲಿದ್ದರು.