ಶಿವಮೊಗ್ಗ: ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ಗಳನ್ನು ನಗದಾಗಿ ಪರಿವರ್ತಿಸಿಕೊಡುವುದಾಗಿ ನಂಬಿಸಿ ಸಾಫ್ಟ್ವೇರ್ ಇಂಜಿನಿಯರ್ಗೆ 1,40,829 ರೂ. ವಂಚನೆ ಮಾಡಲಾಗಿದೆ.
ಸಾಫ್ಟ್ವೇರ್ ಇಂಜಿನಿಯರ್ ಮೊಬೈಲ್ಗೆ ಅಪರಿಚಿತ ವ್ಯಕ್ತಿಯೊಬ್ಬ ಶುಕ್ರವಾರ(ನ.20) ಕರೆ ಮಾಡಿ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ಗಳನ್ನು ಖಾತೆಗೆ ನಗದಾಗಿ ವರ್ಗಾಯಿಸುವುದಾಗಿ ತಿಳಿಸಿದ್ದ. ಅದನ್ನು ಬೇಡವೆಂದು ನಿರಾಕರಿಸಿ ಇಂಜಿನಿಯರ್ ಕರೆ ಕಡಿತಗೊಳಿಸಿದ್ದರು.
ಬಳಿಕ ಬ್ಯಾಂಕ್ನಿಂದ ಬಂದ ಟ್ರಾನ್ಸಾಕ್ಷನ್ ಅಲರ್ಟ್ ಸಂದೇಶಕ್ಕೆ ತಿಳಿಯದೇ ಇಂಜಿನಿಯರ್ ಒಕೆ ಒತ್ತಿದ್ದರು. ತಕ್ಷಣವೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ನಿಂದ ಮೊದಲ ಬಾರಿಗೆ 35,391 ರೂ., ಎರಡನೇ ಬಾರಿಗೆ 35,391 ರೂ. ಹಾಗೂ ಮೂರನೇ ಬಾರಿಗೆ 70,046 ರೂ. ಕಡಿತವಾಗಿದೆ.ಈ ಬಗ್ಗೆ ಇಂಜಿನಿಯರ್ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.