ದೇವದುರ್ಗದ ಸಿದ್ದಗಂಗಾ ವೃತ್ತದಲ್ಲಿ ಶಿವಕುಮಾರ ಸ್ವಾಮೀಜಿ ಜಯಂತಿ ಆಚರಿಸಲಾಯಿತು. ಅಭಿಮಾನಿ ಬಳಗದ ಅಧ್ಯಕ್ಷ ಮಲ್ಲಯ್ಯಸ್ವಾಮಿ ಹಿರೇಮಠ ಅಂಜಳ, ಮುಖಂಡರಾದ ಮಹಾಂತಯ್ಯ ಸ್ವಾಮಿ ಲಿಂಗದಹಳ್ಳಿ, ಶಿವಲಿಂಗಯ್ಯ ತಾತ, ಸಿದ್ದು ಜೇರಬಂಡಿ, ಶಿವರಾಜ, ಶ್ರೀಕಾಂತ ಇತರರಿದ್ದರು. 
ಜಿಲ್ಲೆ

ಶಿವಕುಮಾರ ಸ್ವಾಮೀಜಿ ಸರ್ವರಿಗೂ ಮಾದರಿ

ಪ್ರವೀಣ ಉದುಸಾ ದಲಬಂಜನ್

ದೇವದುರ್ಗ: ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಸದ್ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಿರಿಯ ವಕೀಲ ಮಲ್ಲಣ್ಣ ಗೆಜ್ಜೆಬಾವಿ ಹೇಳಿದರು.

ಪಟ್ಟಣದ ಕೆಇಬಿ ರಸ್ತೆಯ ಸಿದ್ದಗಂಗಾ ವೃತ್ತದಲ್ಲಿ ಸ್ವಾಮೀಜಿ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಶಿವಕುಮಾರ ಸ್ವಾಮೀಜಿ ಜನ್ಮದಿನ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಸಿದ್ದಗಂಗಾ ಶ್ರೀಗಳು ಜೀವನವನ್ನು ಸಮಾಜಸೇವೆಗೆ ಮುಡುಪಾಗಿ ಇರಿಸಿದ್ದರು. ಜೋಳಿಗೆ ಹಿಡಿದು ಮಠಕಟ್ಟಿ ಲಕ್ಷಾಂತರ ಭಕ್ತರಿಗೆ ಆಶ್ರಯ ನೀಡಿದರು ಎಂದರು.

ಸಿದ್ದಗಂಗಾ ಮಠ ಸ್ಥಾಪನೆ ಮಾಡಿ ಬಡವರ ಮಕ್ಕಳಿಗೆ ಉಚಿತವಾಗಿ ಶಿಕ್ಷಣ, ಆಶ್ರಯ, ಅನ್ನ ನೀಡುವ ಮೂಲಕ ತ್ರಿವಿಧ ದಾಸೋಹ ಸೇವೆ ಮಾಡಿ ಹೊಸ ಮನ್ವಂತರಕ್ಕೆ ನಾಂದಿಹಾಡಿದ್ದಾರೆ. ಸಿದ್ದಗಂಗಾ ಮಠದಲ್ಲಿ ಅಭ್ಯಾಸ ಮಾಡಿದ ಲಕ್ಷಾಂತರ ವಿದ್ಯಾರ್ಥಿಗಳು ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಅಲ್ಲದೆ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.