ಜಿಲ್ಲೆ

ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ನೀಡಲಿ

ರೇಷ್ಮೆ ನಗರ ಡೆಸ್ಕ್

ಮಾಗಡಿ: ತಾಲೂಕಿನ ವೀರಾಪುರ ಗ್ರಾಮದಲ್ಲಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರಸ್ವಾಮೀಜಿ ಜನ್ಮದಿನ ಹಾಗೂ ಶ್ರೀ ರಾಮನವಮಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರ ತಂದೆ ಹೊನ್ನಪ್ಪ, ತಾಯಿ ಗಂಗಮ್ಮ ಅವರ ಗದ್ದುಗೆ ಬಳಿ ಗ್ರಾಮಸ್ಥರು ಸೇರಿ ಪ್ರತಿವರ್ಷದಂತೆ ಈ ಭಾರಿಯೂ ಡಾ.ಶಿವಕುಮಾರಸ್ವಾಮೀಜಿ ಜನ್ಮದಿನ ಹಾಗೂ ರಾಮನವಮಿ ಆಚರಿಸಿದರು.

ಗ್ರಾಮಸ್ಥ ಲಿಂಗಮುತ್ತಿ ಹೊನ್ನಪ್ಪ ಮಾತನಾಡಿ, ಡಾ.ಶಿವಕುಮಾರ ಸ್ವಾಮೀಜಿ ಅವರು ವಿಶ್ವರತ್ನರಾಗಿದ್ದಾರೆ, ಸರ್ಕಾರ ಮಾಡಬೇಕಾದ ಕೆಲಸವನ್ನು ಶ್ರೀಗಳು ಮಾಡಿ ಜಗತ್ತಿಗೆ ಬೆಳಕಾಗಿದ್ದಾರೆ. ಗ್ರಾಮದ ಬಳಿ ನಿಮಿಸುತ್ತಿರುವ ಶ್ರೀಗಳ 111 ಅಡಿ ಎತ್ತರದ ಪ್ರತಿಮೆಯ ಕಾಮಗಾರಿ ಪ್ರಗತಿ ಹಂತದಲ್ಲಿದ್ದು, ಶೀಘ್ರವೇ ಪೂರ್ಣಗೊಳಿಸಲು ಸರ್ಕಾರ ಮುಂದಾಗಬೇಕು. ಅವರಿಗೆ ಭಾರತ ರತ್ನ ನೀಡಬೇಕೆಂದು ಆಗ್ರಹಿಸಿದರು.

ಅಂಗನವಾಡಿ ರಾಜಮ್ಮ, ಉಷಾ, ರೇಖಾ, ಯಶಸ್, ಡೇರಿ ಚಂದ್ರಶೇಖರ್, ಅಂಗಡಿ ಚಂದ್ರಶೇಖರ್, ಬೋಜರಾಜು, ಹರೀಶ್, ಗಿರೀಶ್, ರಾಜಶೇಖರ್, ನವೀನ್, ಪಟ್ನಾಯಕ್, ರುದ್ರೇಶ್, ಗಿರಿಜಾ ಇತರರು ಇದ್ದರು.