oplus_2 
ಜಿಲ್ಲೆ

ಶಿವಕುಮಾರ ರಾಜೀನಾಮೆಗೆ ಆಗ್ರಹ

ಚನ್ನಮ್ಮನ ಕಿತ್ತೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿಕೆ ಖಂಡಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದ ರಾಣಿ ಚನ್ನಮ್ಮ ವೃತ್ತದಲ್ಲಿ ಮಂಗಳವಾರ ಪ್ರತಿಭಟಿಸಿದರು.

ಮಾಜಿ ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ಮುಸ್ಲಿಮರಿಗೆ ಶೇ.4 ಮೀಸಲಾತಿ ಕಲ್ಪಿಸುವ ವಿಚಾರವಾಗಿ ಸಂವಿಧಾನ ಬದಲಾವಣೆ ಪ್ರಸ್ತಾಪ ಮಾಡಿರುವ ಕಾಂಗ್ರೆಸ್​ ಉದ್ದೇಶ ರಾಜ್ಯದ ಜನರಿಗೆ ಅರ್ಥವಾಗುತ್ತಿದೆ. ಸಂವಿಧಾನಕ್ಕೆ ಅಗೌರವ ತರುವ ಹೇಳಿಕೆ ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಬಿಜೆಪಿ ತಾಲೂಕಾಧ್ಯ ಶ್ರೀಕರ ಕುಲಕರ್ಣಿ, ಲ$್ಮ ಇನಾಮದಾರ ಮಾತನಾಡಿ, ಕಾಂಗ್ರೆಸ್​ ಜನರ ಮಧ್ಯೆ ಜಗಳ ಹಚ್ಚುತ್ತಿದೆ ಎಂದರು.

ಬಿಜೆಪಿ ಮುಖಂಡ ಬಸವರಾಜ ಪರವಣ್ಣನವರ, ಉಳವಪ್ಪ ಉಳ್ಳೆಗಡ್ಡಿ, ಸಂದೀಪ ದೇಶಪಾಂಡೆ, ಅಪ್ಪಣ್ಣ ಪಾಗಾದ, ಶಿವಾನಂದ ಹನುಮಸಾಗರ,

ಬಸವರಾಜ ಮಾತ್ನವರ, ರವಿರಾಜ ಇನಾಮದಾರ, ರಮೇಶ ಉಗರಖೋಡ್​, ಸಿದ್ದು ಬೋಳನ್ನವರ, ದಿನೇಶ ವಳಸಂಗ ಇತರರಿದ್ದರು.