ಜಿಲ್ಲೆ

ಸಜ್ಜಾದೆ ನಶೀನ್ ಡಾ.ಸೈಯದ್ ಷಾ ಖ್ರುಸ್ರೋ ಹುಸೈನಿ ನಿಧನಕ್ಕೆ ‌ಶಿವಕಾಂತ‌ ಮಹಾಜನ ತೀವ್ರ ಸಂತಾಪ

ಶ್ರೇಷ್ಠ ಸೂಫಿ ಸಂತನ ಕಳೆದುಕೊಂಡು ನಾಡಿಗೆ ಭರಿಸಲಾಗದ ನಷ್ಟ ವಾಗಿದೆ : ಪವಿತ್ರ ಆತ್ಮಕ್ಜೆ ಚಿರಶಾಂತಿ ಲಭಿಸಲಿ

ಕಲಬುರಗಿ: ಜಿಲ್ಲೆಯ ಪ್ರಸಿದ್ಧ ಸೂಫಿ ಸಂತ ಹಜರತ್ ಖಾಜಾ ಬಂದಾ ನವಾಜ್ ದರ್ಗಾದ ಪೀಠಾಧಿಪತಿ ಹಾಗೂ ಕೆಬಿಎನ್ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಹಾಗೂ ವಿದ್ವಾಂಸಕರಾಗಿದ್ದ ಸಜ್ಜಾದೆ ನಶೀನ್  ಡಾ. ಸೈಯದ್ ಷಾ ಖ್ರುಸ್ರೋ ಹುಸೈನಿ ಅವರ ನಿಧನಕ್ಕೆ ಬಿಜೆಪಿ ಹಿರಿಯ ಮುಖಂಡ ಹಾಗೂ ಮಹಾಜನ ಫೌಂಡೇಷನ್ ಸಂಸ್ಥಾಪಕರಾದ ಶಿವಕಾಂತ ಸಿ. ಮಹಾಜನ್

ಸಜ್ಜಾದೆಯವರಿಗೆ ಅಂತಿಮ ನಮನ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿ, ಅವರು ಪ್ರಸಿದ್ಧ ಸೂಫಿ ಸಂತ ಹಜರತ್ ಖಾಜಾ ಬಂದಾ ನವಾಜ್ ಅವರ 23ನೇ ವಂಶಸ್ಥರಾಗಿದ್ದರು. ತಮ್ಮ ಆಳವಾದ ಆಧ್ಯಾತ್ಮಿಕತೆಗೆ ಮಾತ್ರವಲ್ಲದೆ ಬೌದ್ಧಿಕ ಕೊಡುಗೆಗಳಿಗಾಗಿಯೂ ಕಲ್ಯಾಣ ಕರ್ನಾಟಕವಲ್ಲದೇ, ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿದ್ದರು. ಮಹಾನ್ ವಿದ್ವಾಂಸರಾಗಿದ್ದ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಅವರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಕಂಬನಿ ಮಿಡಿದರು.

ಸೈಯದ್ ಷಾ ಖ್ರುಸ್ರೋ ಹುಸೈನಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಕೆಬಿಎನ್ ವಿವಿ ಮೂಲಕ ಅನೇಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮೂಡಿಸಿದರು. ಅವರ ಈ ಸಾಧನೆಗೆ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಗುಲ್ಬರ್ಗ ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಹುಸೈನಿ ಅವರ ಅಗಲಿಕೆ ಕಲ್ಯಾಣ ಕರ್ನಾಟಕ ಭಾಗದ ಬಹುದೊಡ್ಡ ನಷ್ಟವಾಗಿದೆ.‌ಶ್ರೇಷ್ಠ ಸೂಫಿ ಸಂತನ ಕಳೆದುಕೊಂಡೇವು  ಎಂದು ಮಹಾಜನ ಮರುಗಿದ್ದಾರೆ.