ಕೆರೂರ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು. ರಮೇಶ ಮಾಡಬಾಳ, ಡಾ.ಬಸವರಾಜ ಬೋಂಬ್ಲೆ, ಕುಮಾರ ಐಹೊಳ್ಳಿ, ಸಿದ್ದಣ್ಣ ಕೊಣ್ಣೂರ, ಆನಂದ ಪರದೇಶಿ, ಹನುಮಂತ ಪ್ರಭಾಕರ ಮತ್ತಿತರರಿದ್ದಾರೆ. 
ಜಿಲ್ಲೆ

ಶಿವಾಜಿ ಧೈರ್ಯ, ಸಾಹಸ ಯುವಕರಿಗೆ ಸ್ಫೂರ್ತಿ

ಕೆರೂರ: ಶಿವಾಜಿ ಮಹಾರಾಜರು ಅಪ್ಪಟ ದೇಶ ಭಕ್ತರಾಗಿದ್ದು, ಅವರ ಧೈರ್ಯ, ಸಾಹಸ ಯುವಕರಿಗೆ ಸ್ಫೂರ್ತಿದಾಯಕವಾಗಿವೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ ಮಾಡಬಾಳ ಹೇಳಿದರು.

ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ.ಬಸವರಾಜ ಬೋಂಬ್ಲೆ ಮಾತನಾಡಿ, ವಿದ್ಯಾರ್ಥಿಗಳು ಶಿವಾಜಿಯ ಜೀವನ ಮೌಲ್ಯಗಳನ್ನು ಅನುಸರಿಸಬೇಕು ಎಂದರು. ಪಟ್ಟಣ ಪಂಚಾಯಿತಿ ಸದಸ್ಯರಾದ ಕುಮಾರ ಐಹೊಳ್ಳಿ, ಸಿದ್ದಣ್ಣ ಕೊಣ್ಣೂರ, ಮುಖಂಡ ಆನಂದ ಪರದೇಶಿ, ಹನುಮಂತ ಪ್ರಭಾಕರ, ಪಟ್ಟಣ ಪಂಚಾಯಿತಿ ಸಿಬ್ಬಂದಿ ಎಂ.ಐ. ಹೊಸಮನಿ, ಜಿ.ಎ. ನದ್ಾ, ಅಶ್ವತ್ಥ ರಂಗನೌಡ್ರ, ಮಾಂತೇಶ ಅಣೆನ್ನವರ, ಸಂಗಮೇಶ ಮಾದರ, ನವೀನ ಮಹಾಜನ್ನವರ ಮತ್ತಿತರರಿದ್ದರು.