ಕೆರೂರ ಪಟ್ಟಣದಲ್ಲಿ ಹಿಂದು ಜಾಗರಣ ವೇದಿಕೆಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಅರುಣ ಕಟ್ಟಿಮನಿ, ರಾಚಣ್ಣ ಕುಂಬಾರ, ಗುಂಡಪ್ಪ ಬೋರಣ್ಣವರ, ಕಾಶಿನಾಥ ಗೌಡರ ಇತರರಿದ್ದರು. 
ಜಿಲ್ಲೆ

ಶಿವಾಜಿ ಮೂರ್ತಿ ಮರು ಸ್ಥಾಪಿಸಿ

Vijayapura - Desk - Chinnayya Chinnayyanamath

ಕೆರೂರ: ಬಾಗಲಕೋಟೆಯಲ್ಲಿ ಶಿವಾಜಿ ಮೂರ್ತಿ ತೆರವುಗೊಳಿಸಿರುವುದನ್ನು ಖಂಡಿಸಿ ಶುಕ್ರವಾರ ಪಟ್ಟಣದಲ್ಲಿ ಹಿಂದು ಜಾಗರಣ ವೇದಿಕೆಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಉಪ ತಹಸೀಲ್ದಾರ್ ರಾಜಶೇಖರ ಸಾತಿಹಾಳ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನಾ ಮೆರವಣಿಗೆ ಹೊಸಪೇಟಿ ಬಡಾವಣೆಯಿಂದ ಆರಂಭಗೊಂಡು ಮ್ಯಾಗಡಿ ಓಣಿ, ಕಿಲ್ಲಾ ಓಣಿ, ಬಣಗಾರ ಅಗಸಿ, ತರಕಾರಿ ಮಾರುಕಟ್ಟೆ, ಹಳಪೇಟಿ ಓಣಿ, ಬಸ್ ನಿಲ್ದಾಣ, ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ರಾಷ್ಟ್ರೀಯ ಹೆದ್ದಾರಿ ಮೂಲಕ ನಾಡಕಚೇರಿ ತಲುಪಿತು.

ರಾಮದುರ್ಗ ಹಿಂದು ಜಾಗರಣ ವೇದಿಕೆ ಸಂಚಾಲಕ ವಿಠ್ಠಲ ಚನ್ನಾಪೂರ ಮಾತನಾಡಿ, ಕಾನೂನು ಎಲ್ಲರಿಗೂ ಒಂದೇ ಇರಬೇಕು. ಕೆಲವು ಕಾಣದ ಕೈಗಳ ಒತ್ತಡಕ್ಕೆ ಮನಿದು ಜಿಲ್ಲಾಡಳಿತ ಹಿಂದುಗಳ ಭಾವನೆಗಳಿಗೆ ಧಕ್ಕೆ ತರುವಂಥ ಕೆಲಸ ಮಾಡುತ್ತಿದೆ. ಸೂಕ್ತ ರೀತಿಯಲ್ಲಿ ಪರಿಶೀಲನೆ ಮಾಡಿ ಶಿವಾಜಿ ಮೂರ್ತಿ ಮರು ಸ್ಥಾಪನೆ ಮಾಡಬೇಕು. ಒಂದು ವೇಳೆ ಮಾಡದೆ ಹೋದರೆ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಪಿಎಸ್‌ಐ ಕುಮಾರ ಹಿತ್ತಲಮನಿ ನೇತೃತ್ವದಲ್ಲಿ ಪೊಲಿೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಅರುಣ ಕಟ್ಟಿಮನಿ, ರಾಚಣ್ಣ ಕುಂಬಾರ, ಗುಂಡಪ್ಪ ಬೋರಣ್ಣವರ, ಕಾಶಿನಾಥ ಗೌಡರ, ಗೋಪಾಲ ದಾಸಮನಿ, ಸಿದ್ದಪ್ಪ ಡೊಳ್ಳಿ ಹಾಗೂ ಎಲ್ಲ ಹಿಂದು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.