ವಿಜಯಪುರದ ಶ್ರೀ ಶಿವಾಜಿ ಮಹಾರಾಜ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯಲ್ಲಿ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಆಚರಿಸಲಾಯಿತು. ಸಂಜಯ ಜಂಬೂರೆ, ಬಿ.ಟಿ. ತರಸೆ, ಡಾ. ಸದಾಶಿವ ಪವಾರ ಮತ್ತಿತರರಿದ್ದಾರೆ. 
ಜಿಲ್ಲೆ

ಶಿವಾಜಿ ಮಹಾರಾಜ ಮಹಾನ್ ಪುರುಷರು

Vijayapura - Desk - Gurappa Lokuri

ವಿಜಯಪುರ: ಶಿವಾಜಿ ಮಹಾರಾಜರಂತಹ ಮಹಾನ್ ಪುರುಷರು ತಮ್ಮ ಬಾಳಿನುದ್ದಕ್ಕೂ ತೋರಿಸಿದ ಉನ್ನತ ನೈತಿಕತೆಯ ನಿದರ್ಶನಗಳು ಸಾಕಷ್ಟು ಜನರಲ್ಲಿ ಪರಿಣಾಮ ಬೀರಿವೆ ಎಂದು ಶಿವಾಜಿ ಬ್ಯಾಂಕಿನ ಉಪಾಧ್ಯಕ್ಷ ಸಂಜಯ ಜಂಬೂರೆ ಹೇಳಿದರು.

ನಗರದ ಎಂಜಿ ರಸ್ತೆಯಲ್ಲಿರುವ ಶ್ರೀ ಶಿವಾಜಿ ಮಹಾರಾಜ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತ್ಯುತ್ಸವದಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಶಿವಾಜಿ ಮಹಾರಾಜರ ಕರುಣಾಮಯಿ ವ್ಯಕ್ತಿತ್ವ ಅರ್ಥಮಾಡಿಕೊಳ್ಳಲು ಮೊದಲು ನಮ್ಮ ಮನಸ್ಸನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಅಲ್ಲದೆ, ಹೃದಯವನ್ನು ಭಕ್ತಿಭಾವದಿಂದ ಹಸನಾಗಿಸಿಕೊಳ್ಳಬೇಕು ಎಂದರು.

ಅದಕ್ಕೂ ಮುನ್ನ ಸಂಘದ ಕಟ್ಟಡದ ಮೇಲೆ ನಡೆದ ಭಗವಾ ಧ್ವಜಾರೋಹಣವನ್ನು ಸಂಘದ ಅಧ್ಯಕ್ಷ ಶಂಕರ ಕನಸೆ ನೆರೆವೇರಿಸಿದರು. ನಂತರ ಇಲ್ಲಿನ ಶಿವಾಜಿ ವೃತ್ತದಲ್ಲಿರುವ ಪ್ರತಿಮೆ ಹಾಗೂ ಸರ್ಕಾರಿ ಮರಾಠಿ ಶಾಲೆಯ ಆವರಣದಲ್ಲಿರುವ ಶಿವಾಜಿ ಮಹಾರಾಜರ ಪ್ರತಿಮೆಗಳಿಗೆ ಸಂಘದ ವತಿಯಿಂದ ಪುಷ್ಪಾರ್ಚನೆ ಸಲ್ಲಿಸಲಾಯಿತು.

ಸಂಘದ ನಿರ್ದೆಶಕರಾದ ಬಿ.ಟಿ. ತರಸೆ, ಡಾ. ಸದಾಶಿವ ಪವಾರ, ಮಹಾದೇವ ಪವಾರ, ಪ್ರವೀಣ ಬೊಡಕೆ, ರಾಮಚಂದ್ರ ಚವಾಣ, ಸರೋಜನಿ ನಿಕ್ಕಂ, ಅಂಬುತಾಯಿ ಜಾಧವ, ಸುರೇಖಾ ಕದಂ, ರವಿ ಮದಬಾವಿ, ಭಾರತ ದೇವಕುಳೆ, ಪಾಂಡುರಂಗ ರೋಹಿತೆ, ಪ್ರಧಾನ ವ್ಯವಸ್ಥಾಪಕ ಸಂಜಯ ಜಾಧವ, ವ್ಯವಸ್ಥಾಪಕರಾದ ಚಂದ್ರಕಾಂತ ಜಾಧವ, ಅಂಬಾದಾಸ ಚವಾಣ ಮತ್ತಿತರರಿದ್ದರು.