ಜಿಲ್ಲೆ

ಶಿವಾಜಿ ಮಹಾರಾಜ್ ಅವರು ಒಬ್ಬ ಆದರ್ಶ ಪುರುಷ

ಮೈಸೂರು: ಶಿವಾಜಿ ಮಹಾರಾಜ್ ಅವರು ಒಬ್ಬ ಆದರ್ಶ ಪುರುಷ. ಸರ್ವಧರ್ಮವನ್ನು ಸಮಾನವಾಗಿ ಕಾಣುತ್ತಿದ್ದ ಸರ್ವಗುಣ ಸಂಪನ್ನರಾಗಿದ್ದರು ಎಂದು ಪ್ರಾಧ್ಯಾಪಕ ಡಾ.ಬಿ.ರಮೇಶ್ ಹೇಳಿದರು.

ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ದೇಶವನ್ನು ಸಾವಿರಾರು ರಾಜರು ಆಳಿ ಮರೆಯಾಗಿದ್ದಾರೆ. ಆದರೆ ಶಿವಾಜಿಯರು ತಮ್ಮ ಮರಣದ ನಂತರವೂ ಪ್ರತಿಯೊಬ್ಬರ ಮನಸಿನಲ್ಲಿಯೂ ಮಹಾರಾಜರಾಗಿ ಸಂಭ್ರಮಿಸುತ್ತಿದ್ದಾರೆ. ಇದು ಅವರು ಅವರ ವ್ಯಕ್ತಿತ್ವದಿಂದ ಗಳಿಸಿರುವ ಗೌರವ. ಇವರ ಸಾಲಿಗೆ ಇನ್ನೂ ಹಲವಾರು ಮಹಾಪುರುಷರು ಸೇರುತ್ತಾರೆ. ಅಂತಹ ವ್ಯಕ್ತಿಗಳ ಸಾಧನೆ, ಆದರ್ಶ ಗುಣಗಳನ್ನು ಇಂದಿನ ಯುವಜನರಿಗೆ ತಿಳಿಸುವ ಕೆಲಸವನ್ನು ಜಯಂತಿಗಳು ಮಾಡುತ್ತಿವೆ ಎಂದು ಹೇಳಿದರು.