ಜಿಲ್ಲೆ

ಭಾರತಕ್ಕೆ ಅಪಾರ ಕೊಡುಗೆ

ಹನುಮಸಾಗರ: ಹಿಂದು ಸಮುದಾಯದ ಅಸ್ತಿತ್ವಕ್ಕಾಗಿ ಹೋರಾಟ ಮಾಡಿದ ವೀರ ಪರಾಕ್ರಮಿ ಛತ್ರಪತಿ ಶಿವಾಜಿ ಮಹಾರಾಜರ ತತ್ವಾದರ್ಶಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಲಿ ಎಂದು ಬಿಜೆಪಿ ಮಾಜಿ ತಾಲೂಕು ಅಧ್ಯಕ್ಷ ಬಸವರಾಜ ಹಳ್ಳೂರ ಹೇಳಿದರು.

ಪಟ್ಟಣದ ಛತ್ರಪತಿ ಶಿವಾಜಿ ಮಹಾರಾಜರ ಸರ್ಕಲ್ನಲ್ಲಿ ಶಿವಾಜಿ ಜಯಂತಿ ಅಂಗವಾಗಿ ಬುಧವಾರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಧೈರ್ಯ, ಶೌರ್ಯ, ರಾಷ್ಟ್ರ ಪ್ರೇಮಕ್ಕೆ ಹೆಸರಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರರು ಭಾರತ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮೊಘಲರ ವಿರುದ್ಧ ಹೋರಾಟ ಮಾಡಿ ಭಾರತವನ್ನು ರಕ್ಷಿಸಿದ್ದಾರೆ. ಆಡಳಿತದಲ್ಲಿ ಎಲ್ಲ ವರ್ಗದವರಿಗೂ ಒಳಿತು ಮಾಡಿದ್ದಾರೆ. ಮಹಿಳೆಯರಿಗೆ ಅಪಾರ ಗೌರವ ನೀಡುತ್ತಿದ್ದರು. ಶಿವಾಜಿ ಮಹಾರಾಜರ ಆಡಳಿತ ಶಿವಾಜಿ ಇತರರಿಗೆ ಮಾದರಿಯಾಗಿತ್ತು ಎಂದರು.

ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಮುಖಂಡರಾದ ಸಿದ್ದಯ್ಯ ಬಾಳಿಹಳ್ಳಿಮಠ, ಶ್ರೀಶೈಲ್ ಮೋಟಗಿ, ಶಿವಪುತ್ರಪ್ಪ ಕೊಳೂರು, ಮಹಾಂತಯ್ಯ ಕೋಮಾರಿ, ಹನುಮಂತ ಪೂಜಾರ, ಚಂದ್ರು ಬೆಳಗಲ್, ಮೌಲಾಲಿ ಮೋಟಗಿ, ಸಂಗಮೇಶ ಕರಂಡಿ, ಕಳಕಪ್ಪ ನಿರ್ವಾಣಿ, ವಿಜಯ ಕುಷ್ಟಗಿ, ಮಂಜುನಾಥ ಶಿರೋಳ, ವಿದ್ಯಾಧರ ಸೊಪ್ಪಿಮಠ, ಸೋಮಣ್ಣ ಹೊಸಮನಿ, ಮರೇಗೌಡ ಬೋದುರ, ಬಸವರಾಜ ಬಿಲ್ಕಾರ, ನಾಗರಾಜ ಕಂದಗಲ್, ಶರಣಪ್ಪ ಬೋದೂರು, ಮಂಜು ವಾಲ್ಮೀಕಿ, ನಾಗರಾಜ ಕಂದಗಲ್, ರಮೇಶ ಬಡಿಗೇರ, ಉಮೇಶ ಬಾಚಲಾಪೂರ ಇತರರಿದ್ದರು.