ಜಿಲ್ಲೆ

ಫೆ.19 ರಂದು ಅದ್ದೂರಿ ಶಿವಾಜಿ ಜಯಂತಿ ಆಚರಣೆ

Uttara Kannada - Subash Hegde

ಕಾರವಾರ: ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಫೆ.19 ರಂದು ನಗರದಲ್ಲಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿ ಸಮಿತಿ ಅಧ್ಯಕ್ಷ ಸತೀಶ ಕೊಳಂಬಕರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಜರಂಗದಳ, ಭಗತ್ ಸಿಂಗ್ ಸೇನೆ ಹಾಗೂ ಇತರ ಸಂಘಟನೆಯಿಂದ ಅದ್ದೂರಿಯಾಗಿ ಆಚರಿಸಲಾಗುತ್ತಿದೆ.

ಅಂದು ಬೆಳಗ್ಗೆ 9.30 ಕ್ಕೆ ನಗರಸಭೆ ಗಾಂಧಿ ಉದ್ಯಾನದಲ್ಲಿರುವ ಶಿವಾಜಿ ಮಹಾರಾಜರ ಪುತ್ಥಳಿಗೆ ‌ಕ್ಷೀರಾಭಿಷೇಕ ಮಾಡಲಾಗುವುದು, ನಂತರ ಮಧ್ಯಾಹ್ನ 3.30 ರಿಂದ ಬಾಡ ಮಹಾದೇವ ದೇವಸ್ಥಾನದಿಂದ ಬೈಕ್ ರ್ಯಾಲಿ ಆಯೋಜಿಸಲಾಗುತ್ತಿದೆ ಎಂದರು. ಭಜರಂಗದಳ ತಾಲೂಕು ಸಂಯೋಜಕ ಅಮಿತ್, ವಿವಿಧ ಸಂಘಟನೆಗಳ ಪ್ರಮುಖರಾದ ಓಂಕಾರ ಅಂಕೋಲೆಕರ್, ಪ್ರಶಾಂತ ವಾರಕರ್, ಸಿದ್ದರ್ಥ ಪೆಡ್ನೆಕರ್, ಸಂತೋಷ ಎಂ. ನಾಯ್ಕ, ಸೂರ್ಯಕಾಂತ ಕಳಸ್, ಗಜಾನನ ನಾಯ್ಕ, ಗಣೇಶ ನಾಯರ್ ಸುದ್ದಿಗೋಷ್ಠಿಯಲ್ಲಿದ್ದರು.