ಬೆಳಗಾವಿ:ನಗರದಲ್ಲಿ ಶನಿವಾರ ರಾತ್ರಿ ಜರುಗಿದ ಶಿವಾಜಿ ಜಯಂತಿ ಮೆರವಣಿಗೆಯಲ್ಲಿ ಶಿವಾಜಿ ಚರಿತ್ರೆಯ ಕುರಿತು ಕಿರುನಾಟಕ ಪ್ರದರ್ಶನ ಗಮನ ಸೆಳೆಯಿತು.
ನಗರದ ನರಗುಂದಕರ ಭಾವೇ ಚೌಕ್‌ನಿಂದ ಮೆರವಣಿಗೆಯ ಉದ್ದಕ್ಕೂವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದ್ದ ವಾಹನಗಳಲ್ಲಿ ರಸ್ತೆಗಿಳಿದ ಸ್ತಬ್ಧ ಚಿತ್ರಗಳು, ರೂಪಕಗಳು ಶಿವಾಜಿಯ ಇತಿಹಾಸವನ್ನು ಪ್ರತಿಬಿಂಬಿಸಿದವು. ಅದರಲ್ಲೂ ಶಿವಾಜಿ ಪ್ರತಿಮೆ ಹಾಗೂ ಬಸವಣ್ಣನವರ ಭಾವಚಿತ್ರದ ರೂಪಕ ಒಟ್ಟೊಟ್ಟಿಗೆ ಸಾಗಿಸುತ್ತಿದ್ದು ವಿಶೇಷವಾಗಿತ್ತು. ಶಿವಾಜಿ ವೇಷಧಾರಿ ಮಕ್ಕಳು ನೋಡುಗರ ಗಮನ ಸೆಳೆದರು. ವಿವಿಧ ಸಂಘಟನೆಗಳ ಸದಸ್ಯರು ಶಿವಾಜಿ ಚರಿತ್ರೆಯ ಕುರಿತು ಕಿರುನಾಟಕ ಪ್ರದರ್ಶನ ನಡೆಯಿತು.