ಜಿಲ್ಲೆ

ಸಾವರ್ಕರ್​ ವೃತ್ತ, ಶಿವಾಜಿ ಪುತ್ಥಳಿ ಮಾಡಿಯೇ ಸಿದ್ಧ: ಯಶ್​ಪಾಲ್​

ಗೋಪಾಲಕೃಷ್ಣ ಪಾದೂರ್

ಉಡುಪಿ: ದೇಶದ 142 ಕೋಟಿ ಜನ ಇಂದಿಗೂ ನೆಮ್ಮದಿ ಜೀವನ ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ಹಿಂದು ಹೃದಯ ಸಾಮ್ರಾಟ ಛತಪತಿ ಶಿವಾಜಿ ಮಹಾರಾಜ್​ ಅವರೇ ಕಾರಣ. ಇಂದಿನ ಯುವಸಮುದಾಯಕ್ಕೆ ಶಿವಾಜಿಯ ಚರಿತ್ರೆ ತಿಳಿದಿಲ್ಲ. ಆತನ ಶೌರ್ಯ, ಪರಾಕ್ರಮಗಳ ಬಗ್ಗೆ ಮಕ್ಕಳು ತಿಳಿದುಕೊಳ್ಳುವಂತಾಗಬೇಕು ಎಂದು ಶಾಸಕ ಯಶ್​ಪಾಲ್​ ಸುವರ್ಣ ಅಭಿಮತ ವ್ಯಕ್ತಪಡಿಸಿದರು.

ಉಡುಪಿಯ ಬ್ರಹ್ಮಗಿರಿಯಲ್ಲಿರುವ ಲಯನ್ಸ್​ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಗುರುಪ್ರಸಾದ್​ ಭಟ್​ ಉಡುಪಿ ವಿರಚಿತ "ಛತ್ರಪತಿ' ನಾ ಕಂಡಂತೆ ಶಿವಾಜಿ ಎಂಬ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದರು.

ಸಾವರ್ಕರ್​ ವೃತ್ತ, ಶಿವಾಜಿ ಪುತ್ಥಳಿ ಮಾಡಿಯೇ ಸಿದ್ಧ
ಉಡುಪಿಯ ಬ್ರಹ್ಮಗಿರಿಯಲ್ಲಿ ಇಂದು ಶಿವಾಜಿಯ ಚರಿತ್ರೆ ಕುರಿತ ಪುಸ್ತಕ ಬಿಡುಗಡೆ ಆಗಿದೆ. ಈ ಹಿಂದೆ ನಾನು ಶಾಸಕನಾಗುವ ಮೊದಲು ಶಿವಾಜಿಯ ಶ್ರೇಷ್ಠತೆ ಸಾರಿದ್ದ ವೀರ ಸಾರ್ವಕರ್​ ಅವರ ಹೆಸರನ್ನು ಬ್ರಹ್ಮಗಿರಿಯ ಸರ್ಕಲ್​ಗೆ ನಾಮಕರಣ ಮಾಡಲು ಅಪಾರ ಪ್ರಯತ್ನ ಮಾಡಿದ್ದೆ. ಆದರೆ, ರಾಜಕಾರಣದಿಂದಾಗಿ ಅದು ಅಂದು ಸಾಧ್ಯವಾಗಿರಲಿಲ್ಲ. ಜನರ ಹಾಗೂ ದೇವರ ಆಶೀರ್ವಾದದಿಂದ ನಾನೀಗ ಶಾಸಕನಾಗಿದ್ದು, ಬ್ರಹ್ಮಗಿರಿಗೆ ಸಾರ್ವಕರ್​ ಸರ್ಕಲ್​ ಎಂದು ನಾಮಕರಣ ಮಾಡಿಯೇ ಸಿದ್ಧ. ಇದಲ್ಲದೆ, ಮಲ್ಪೆ ಬೀಚ್​ನಲ್ಲಿ ಶಿವಾಜಿಯ ಪುತ್ಥಳಿ ನಿರ್ಮಿಸುವ ಕಾರ್ಯ ನಡೆಯುತ್ತಿದೆ ಎಂದು ಶಾಸಕ ಯಶ್​ಪಾಲ್​ ತಿಳಿಸಿದರು.

  • ಬೆಂಗಳೂರಿನ ಸಾಮಾಜಿಕ ಮಾಧ್ಯಮ ಪ್ರಭಾವಿ ಕಿರಣ ಕೆ. ಎಸ್​. ಮಾತನಾಡಿ, 76 ಪುಸ್ತಗಳ ಉಲ್ಲೇಖದೊಂದಿಗೆ ಲೇಖಕ ಭಟ್​ ಅವರು ಅತ್ಯಂತ ತಾಳ್ಮೆ, ಶ್ರದ್ಧೆಯಿಂದ ಶಿವಾಜಿ ಕುರಿತಾಗಿ ಮಾಹಿತಿ ನೀಡಿದ್ದಾರೆ. ಶಿವಾಜಿ ಕುರಿತು ಅಪಾರ ಸಂಖ್ಯೆಯಲ್ಲಿ ಪುಸ್ತಕಗಳು ಲಭ್ಯವಿದ್ದರೂ ಈ ಪುಸ್ತಕ ಓದುವಾಗ ಶಿವಾಜಿ ಕುರಿತೂ ಸಹ ಪ್ರಶ್ನೆ ಉದ್ಭವಿಸುತ್ತದೆ. ಶಿವಾಜಿ ಕೇವಲ ಮಹಾರಾಷ್ಟ್ರಕ್ಕೆ ಸೀಮಿತವಲ್ಲ, ಸಮಸ್ತ ರಾಷ್ಟ್ರದ ಆಸ್ತಿ ಎನ್ನುವುದನ್ನು ಸಾಬೀತು ಮಾಡಿದ್ದಾರೆ ಎಂದರು.

    ಲೇಖಕ ಗುರುಪ್ರಸಾದ್​ ಭಟ್​ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಚಿಂತಕ, ಮ್ಯಾನೇಜ್​ಮೆಂಟ್​ ಗುರು ಸತ್ಯೇಶ ಎನ್​. ಬೆಳ್ಳೂರು ಮಾತನಾಡಿದರು.
    ಲಾಸ್ಯಾ ಕೆ. ಕಳಸ ಪ್ರಾರ್ಥಿಸಿದರು. ರಾಘವೇಂದ್ರ ಭಟ್​ ಕಳಸ ಸ್ವಾಗತಿಸಿದರು. ಕಳಸದ ಪ್ರಭೋದಿನಿ ಶಾಲಾ ಮಕ್ಕಳಿಂದ ನಡೆದ ಶಿವಾಜಿ ಕುರಿತ ಗೀತೆ ಹಾಗೂ ಶಿವ ಗರ್ಜನೆ ಎಂಬ ನಾಸಿಕ್​ ಡೋಲ್​ ಕಾರ್ಯಕ್ರಮ ಗಮನ ಸೆಳೆಯಿತು. ಶ್ರೀಕರ ಭಟ್​ ಹಳುವಳ್ಳಿ ನಿರೂಪಿಸಿದರು. ಬಾಲಕೃಷ್ಣ ಪ್ರಭು ಕಳಸ ವಂದಿಸಿದರು.