ಜಿಲ್ಲೆ

ವಿಪ್ರ ಸಂಟನೆಗಳಿಂದ ಶಿವ ಪಂಚಾಕ್ಷರಿ ಜಪಾನುಷ್ಟಾನ

ಪಡುಬಿದ್ರಿ: ಜೀರ್ಣೋದ್ಧಾರ ಪ್ರಕ್ರಿಯೆಗಳು ನಿರ್ವಿಘ್ನವಾಗಿ, ಯಶಸ್ವಿಯಾಗಿ, ಶ್ರೀವಾಗಿ ನಡೆಯಲು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಈಗಾಗಲೇ ಚಾಲನೆ ನೀಡಲಾಗಿರುವ ಏಕಾದಶ ಕೋಟಿ ಶಿವಪಂಚಾಕ್ಷರಿ ಮಂತ್ರದ ಜಪಾನುಷ್ಟಾನ ಭಾನುವಾರ ದೇಗುಲದ ಬಾಲಾಲಯದಲ್ಲಿ ಉಭಯ ಜಿಲ್ಲೆಗಳ ವಿವಿಧ ವಿಪ್ರ ಸಂಟನೆಗಳಿಂದ ನಡೆಯಿತು.

ದೇವಸ್ಥಾನ ಅರ್ಚಕ ಹೆಜವಾಡಿ ಪದ್ಮನಾಭ ಭಟ್ ಅವರ ದೇವತಾ ಪ್ರಾರ್ಥನೆಯೊಂದಿಗೆ ವಿಧಿಗಳು ಆರಂಭಗೊಂಡವು.

ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ.ರಾಜಗೋಪಾಲ ಉಪಾಧ್ಯಾಯ ವಾತನಾಡಿ, ರುದ್ರ ದೇವರ ಪ್ರೀತ್ಯರ್ಥವಾಗಿ ನಡೆಯುವ ಈ ಜಪ ಯಜ್ಞದಲ್ಲಿ ಬ್ರಾಹ್ಮಣ ವಲಯಗಳ ಸದಸ್ಯರೆಲ್ಲರ ಜತೆಗೂಡಿ ದಿನವಿಡೀ ಪಂಚಾಕ್ಷರಿ ಜಪವನ್ನು ಭಗವಂತನ ಏಕಾದಶ ರೂಪದ ಚಿಂತನೆಯೊಂದಿಗೆ ಗ್ರಾಮ ದೇಗುಲದ ಪುನಃ ನಿರ್ವಾಣದ ಕಾರ್ಯಸಿದ್ಧಿಗಾಗಿ ನಡೆಸಲಾಗುತ್ತಿದೆ ಎಂದರು.

ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಸದಸ್ಯರ ಜತೆಗೂಡಿ ಪಡುಬಿದ್ರಿಯ ವಿಪ್ರರು ಶಿವ ಪಂಚಾಕ್ಷರೀ ಮಂತ್ರ ಜಪ ಮಾಡಿದರು.

ಆನುವಂಶಿಕ ಮೊಕ್ತೇಸರ ಭವಾನಿಶಂಕರ ಹೆಗ್ಡೆ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾವೇಂದ್ರ ನಾವಡ, ಶ್ರೀ ಕೃಷ್ಣಾಪುರ ಶಾಖಾ ಮಠದ ಶ್ರೀನಿವಾಸ ಉಪಾಧ್ಯಾಯ, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸಂದೀಪ್ ಕುವಾರ್ ಮಂಜ, ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಶ್ರೀಕಾಂತ ಉಪಾಧ್ಯಾಯ, ಜನಾರ್ದನ ಶರ್ಮ, ಬಾಲಕೃಷ್ಣ ಕೊರ್ನಾಯ, ಸದಾಶಿವ ಆಚಾರ್ಯ, ರವಾಕಾಂತ ರಾವ್, ಯಾದವೇಂದ್ರ ಉಪಾಧ್ಯಾಯ, ಶ್ರೀಧರ ಆಚಾರ್ಯ, ರಾಜೇಶ ಉಪಾಧ್ಯಾಯ ಮತ್ತಿತರರು ಇದ್ದರು.