ಜಿಲ್ಲೆ

ಶಿವನ ದರ್ಶನ ಪಡೆದು ಮನೆಗೆ ಹೋಗುತ್ತಿದ್ದಾಗ ಅಪಘಾತ: ಕಾರಿನಲ್ಲಿದ್ದ ಮೂವರ ದುರ್ಮರಣ

ಬಳ್ಳಾರಿ: ನಗರದ ಹೊರವಲಯದ ಹೊಸಪೇಟೆ ರಸ್ತೆಯಲ್ಲಿ ಕಾರು-ಲಾರಿ ನಡುವೆ ಗುರುವಾರ ತಡರಾತ್ರಿ ಡಿಕ್ಕಿಯಾಗಿ ಮೂವರು ಸಾವಿಗೀಡಾಗಿದ್ದಾರೆ. ತಾಲೂಕಿನ ಎರಂಗಳಿ ಗ್ರಾಮದ ತಿರುಮಲ (25), ಪ್ರಕಾಶ್ (14) ಮತ್ತು ಶರತ್(25) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವೆಂಕಟೇಶ್, ಮಲ್ಲಿಕಾರ್ಜುನ, ಲಿಂಗೇಶ್‌ಗೆ ಗಾಯಗಳಾಗಿದ್ದು, ವಿಮ್ಸ್‌ಗೆ ದಾಖಲಿಸಲಾಗಿದೆ. ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಶಿವನ ದೇವಸ್ಥಾನಕ್ಕೆ ಹೋಗಿ, ವಾಪಸಾಗುವಾಗ ಈ ಅವಘಡ ನಡೆದಿದೆ.