ಹಿರೇಕೆರೂರ: ಶಿವಶರಣರು ಸಾಮಾಜಿಕ ಪರಿವರ್ತನೆಗೆ ಶ್ರಮಿಸುವ ಮೂಲಕ ಜಗತ್ತಿಗೆ ವಿಶೇಷ ಕೊಡುಗೆ ನೀಡಿದ್ದಾರೆ ಎಂದು ತಾಪಂ ಇಒ ಎಚ್. ಶಶಿಧರ ಹೇಳಿದರು.
ಪಟ್ಟಣದ ಮೆಟ್ರೆಕ್ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಮೂರನೇ ಶ್ರಾವಣ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾಡಿನ ಶಿವಶರಣರು, ಸಂತರು ಹಾಗೂ ವಚನಕಾರರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಉತ್ತಮ ಸಮಾಜ ನಿರ್ಮಾಣಕ್ಕೆ ದಾರ್ಶನಿಕರ ಚಿಂತನೆಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ಎನ್. ಸುರೇಶಕುಮಾರ ಮಾತನಾಡಿದರು. ಶರಣರ ಧಾರ್ಮಿಕ ಚಿಂತನೆಗಳು ಕುರಿತು ಶಿಕ್ಷಕ ನಾಗರಾಜ ಪುರದ ಉಪನ್ಯಾಸ ನೀಡಿದರು.
ತಹಸೀಲ್ದಾರ್ ಡಾ.ಎಚ್. ಪ್ರಭಾಕರಗೌಡ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹಬೂಬಸಾಬ್ ನದಾಫ್, ಎನ್.ಎಸ್. ಹೆಗ್ಗೇರಿ, ಕುಮಾರ ಮಡಿವಾಳರ, ವಸತಿ ನಿಲಯ ಪಾಲಕಿ ಪ್ರೇಮಾ, ಪಿ.ಎಸ್. ಸಾಲಿ, ಬಿ.ಟಿ. ಚಿಂದಿ, ಬಸವರಾಜ ಪೂಜಾರ, ಎಂ.ಎಂ. ಮತ್ತೂರ, ಬಿ.ವಿ. ಸೊರಟೂರ, ಈರಣ್ಣ ಚಿಟ್ಟೂರ, ರಾಮಣ್ಣ ತೆಂಬದ, ಬಿ.ಎಸ್. ಪಾಟೀಲ, ಚಂದ್ರಶೇಖರ ಕನ್ನಪ್ಪಳವರ, ಚನ್ನಬಸಪ್ಪ ಮಾಳಗಿ ಇದ್ದರು.