ಕಾರವಾರ: ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿಯಲ್ಲಿ ಉಂಟಾಗಿರುವ ಮಣ್ಣಿನ ಗುಡ್ಡೆ ತೆರವು ಕಾರ್ಯಾಚರಣೆಗೆ ಅನುದಾನದ ಕೊರತೆ ಉಂಟಾಗಿದೆ. ಇದರಿಂದ ಜಿಲ್ಲೆಯ ಸಚಿವ, ಶಾಸಕರು ತಮ್ಮ ಪ್ರದೇಶಾಭಿವೃದ್ಧಿ ನಿಽಯಿಂದ ಹಣ ಹೊಂದಿಸಿದ್ದು, ಒಂದೆರಡು ದಿನದಲ್ಲಿ ಯಂತ್ರಗಳು ಶಿರೂರಿನತ್ತ ರವಾನೆಯಾಗಬಹುದು ಎಂದು ಬಂದರು ಇಲಾಖೆ ಮಾಹಿತಿ ನೀಡಿದೆ.
ಸಮುದ್ರದಲ್ಲಿ ಹೂಳು ತೆಗೆಯುವ ಅಭಿಷೇನಿಯ ಓಸಿಯನ್ ಸರ್ವೀಸಸ್ ಎಂಬ ಕಂಪನಿಯ ಜತೆ ಮಾತುಕತೆ ನಡೆಸಿ ಗಂಗಾವಳಿ ನದಿಯಲ್ಲಿ ಬಾರ್ಜ್ ಅಳವಡಿಸಿ ಹೂಳು ತೆಗೆಯುವ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಮೊದಲು ಕಂಪನಿಯು 1.20 ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿತ್ತು. ಶಾಸಕ ಸತೀಶ ಸೈಲ್, ಬಂದರು ಇಲಾಖೆ ನಿರ್ದೇಶಕ ಕ್ಯಾಪ್ಟನ್ ಸ್ವಾಮಿ ಹಾಗೂ ಜಿಲ್ಲಾಽಕಾರಿ ಕೆ.ಲಕ್ಷ್ಮೀಪ್ರಿಯಾ ಕುಳಿತು ಸಭೆ ಮಾಡಿದ ನಂತರ 90 ಲಕ್ಷ ರೂ.ಗೆ ಹೂಳು ತೆಗೆಯಲು ಕಂಪನಿ ಒಪ್ಪಿಕೊಂಡಿತ್ತು. ಆದರೆ, ದೊಡ್ಡ ಯಂತ್ರಗಳನ್ನು ಗೋವಾದಿಂದ ತಂದು ವಾಪಸ್ ಕೊಂಡೊಯ್ಯಬೇಕಿರುವುದರಿAದ ಕನಿಷ್ಠ 10 ದಿನ ಕೆಲಸ ನೀಡುವಂತೆ ಕಂಪನಿ ಷರತ್ತು ವಿಧಿಸಿತ್ತು.
ಚತುಷ್ಪಥದ ಕಾಮಗಾರಿಯ ಭಾಗವಾಗಿ ಗುಡ್ಡ ಕುಸಿತ ಉಂಟಾಗಿದ್ದರಿಂದ ಚತುಷ್ಪಥ ಕಾಮಗಾರಿ ಗುತ್ತಿಗೆ ಪಡೆದಿರುವ ಐಆರ್‌ಬಿ ಕಂಪನಿ ಹಣ ನೀಡುವಂತೆ ಜಿಲ್ಲಾಡಳಿತ ಸೂಚನೆ ನೀಡಿತ್ತು. ಆದರೆ, ಐಆರ್‌ಬಿ 41 ಲಕ್ಷ ರೂ.ಗಳನ್ನು ಮಾತ್ರ ಅಭಿಷೇನಿಯ ಕಂಪನಿಗೆ ಬಿಡುಗಡೆ ಮಾಡಿದೆ. ಅಷ್ಟೇ ಹಣದಲ್ಲಿ ಮೂರು ದಿನ ಮಾತ್ರ ಮಾತ್ರ ಕೆಲಸ ಮಾಡಿ ಎಂದು ಹೇಳಲಾಗುತ್ತಿದೆ ಎನ್ನಲಾಗಿದೆ. ಮೂರು ದಿನಕ್ಕಾಗಿ ಭಾರಿ ಯಂತ್ರಗಳನ್ನು ಗೋವಾದಿಂದ ಸಾಗಿಸಲು ನಮಗೆ ಸಾಧ್ಯವಿಲ್ಲ ಎಂದು ಕಂಪನಿಯು ಕಾರ್ಯಾಚರಣೆ ನಡೆಸಲು ಹಿಂದೇಟು ಹಾಕಿತ್ತು.
ಇದರಿಂದ ಶಾಸಕ ಸತೀಶ ಸೈಲ್ ತಮ್ಮ ಪ್ರದೇಶಾಭಿವೃದ್ಧಿ ನಿಽಯಿಂದ 25 ಲಕ್ಷ ರೂ., ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಶಿರಸಿ ಶಾಸಕ ಭೀಮಣ್ಣ ನಾಯ್ಕ ತಮ್ಮ ಪ್ರದೇಶಾಭಿವೃದ್ಧಿ ನಿಽಯಿಂದ ತಲಾ 10 ಲಕ್ಷ ರೂ. ನೀಡಲು ಮುಂದಾಗಿದ್ದಾರೆ. ಹೊನ್ನಾವರ ಬಂದರು ಕಂಪನಿಯು 10 ಲಕ್ಷ ರೂ.ಗಳನ್ನು ನೀಡಲು ಒಪ್ಪಿದ್ದು, ಅದರಲ್ಲಿ 5 ಲಕ್ಷ ರೂ.ಗಳನ್ನು ಈಗಾಗಲೇ ಬಂದರು ಇಲಾಖೆಗೆ ಹಸ್ತಾಂತರಿಸಿದೆ ಎಂದು ಶಾಸಕ ಸೈಲ್ ಕಂಪನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಈಗಾಗಲೇ ನೀವು ಬೇಡಿಕೆ ಇಟ್ಟ ಹಣ ಹೊಂದಾಣಿಕೆಯಾಗಿದ್ದ ಕಾರ್ಯಾಚರಣೆ ನಡೆಸಿ ಎಂದು ಸೈಲ್ ಕಂಪನಿಗೆ ಮನವಿ ಮಾಡಿ ಪತ್ರ ಬರೆದಿದ್ದಾರೆ.
ಆಗಿದ್ದೇನು ...?
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅಂಕೋಲಾ ಶಿರೂರಿನಲ್ಲಿ ಜುಲೈ 16 ರಂದು ಗುಡ್ಡ ಕುಸಿದು 11 ಜನ ನಾಪತ್ತೆಯಾಗಿದ್ದರು. ಅದರಲ್ಲಿ 8 ಜನರ ಶವ ಇದುವರೆಗೆ ಪತ್ತೆಯಾಗಿದೆ. ಶಿರೂರಿನ ಜಗನ್ನಾಥ ನಾಯ್ಕ, ಗಂಗೆಕೊಳ್ಳದ ಲೋಕೇಶ ನಾಯ್ಕ, ಕೇರಳ ಮೂಲದ ಚಾಲಕ ಅರ್ಜುನ್ ಶವ ಒಂದು ಲಾರಿ ಇದುವರೆಗೂ ಸಿಕ್ಕಿಲ್ಲ.
ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಭಾರತೀಯ ಸೇನೆಗಳು, ನೌಕಾಸೇನೆಯ ಮುಳುಗು ತಜ್ಞರ ಪ್ರಯತ್ನದ ನಂತರವೂ ಮೂವರು ಹಾಗೂ ಒಂದು ಲಾರಿ ಎಲ್ಲಿ ಹೋಯಿತು ಎಂಬ ಸುಳಿವೇ ಇಲ್ಲದಂತಾಗಿದೆ. ಗುಡ್ಡ ಕುಸಿತದಿಂದ ನದಿಯ ನಡುವೆ ರಾಶಿ ಮಣ್ಣು ಬಿದ್ದು, ದ್ವೀಪ ಸೃಷ್ಟಿಯಾಗಿದೆ. ಅಲ್ಲಿ ಮೂವರ ದೇಹಗಳು, ಲಾರಿ ಇರಬಹುದು ಎಂದು ಅಂದಾಜಿಸಲಾಗಿತ್ತು. ಮುಳುಗು ತಜ್ಞ ಈಶ್ವರ ಮಲ್ಪೆ ನದಿಯಲ್ಲಿ ಮುಳುಗಿ ನೀರಿನಡಿ ದೊಡ್ಡ ಎರಡು ಮರ, ಹಾಗೂ ಲಾರಿಯ ಅವಶೇಷಗಳನ್ನು ಪತ್ತೆ ಮಾಡಿದ್ದರು. ಆದರೆ, ನದಿಯ ನಡುವೆ ಬಿದ್ದ ಮಣ್ಣು ತೆತೆರವು ಮಾಡುವುದು ಅನಿವಾರ್ಯವಾಗಿದೆ. ಅವುಗಳನ್ನು ತೆಗೆಯಲು ಯಂತ್ರಗಳ ಅವಶ್ಯಕತೆ ಇದೆ ಎಂದು ಅಂದಾಜಿಸಲಾಗಿತ್ತು.
ಕೇರಳದ ಅರ್ಜುನ್ ಪತ್ತೆಗೆ ಕರ್ನಾಟಕ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಕೇರಳದ ವಕೀಲರೊಬ್ಬರು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ತೆರವು ಕಾರ್ಯಾಚರಣೆಗೆ ಕ್ರಮ ವಹಿಸುವಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಈ ನಡುವೆ ಕೇರಳದ ಸಂಸದ ಹಾಗೂ ಶಾಸಕರ ನಿಯೋಗವು ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ನಾವು ಡ್ರಜ್ಜಿಂಗ್ ನಡೆಸುತ್ತೇವೆ. ಅನುಮತಿ ನೀಡಿ ಎಂದು ತಿಳಿಸಿತ್ತು.
ಡ್ರಜ್ಜಿಂಗ್ ಯಂತ್ರಗಳನ್ನು ತಂದು ಕಾರ್ಯಾಚರಣೆ ನಡೆಸಲು ಖಾಸಗಿ ಕಂಪನಿ ಒಪ್ಪಿಕೊಂಡಿದೆ. ಮಳೆ ಇದ್ದ ಕಾರಣ ಕೆಲವು ದಿನ ವಿಳಂಬ ಮಾಡಲಾಗಿತ್ತು. ಈಗ ಒಂದೆರಡು ದಿನದಲ್ಲಿ ಯಂತ್ರವನ್ನು ಗೋವಾದಿಂದ ತರುವ ಸಾಧ್ಯತೆ ಇದೆ.ಕ್ಯಾಪ್ಟನ್ ಸಿ.ಸ್ವಾಮಿಬಂದರು ಇಲಾಖೆ ನಿರ್ದೇಶಕ https://www.vijayavani.net/drowning-in-sea https://www.vijayavani.net/drowning-in-sea