ಜಿಲ್ಲೆ

ಲಾರಿ ನದಿಗೆ ಬಿದ್ದಿರುವುದು ಖಚಿತ

ಕಾರವಾರ: ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಕಟ್ಟಿಗೆ ತುಂಬಿದ್ದ ಲಾರಿ ಗಂಗಾವಳಿ ನದಿಗೆ ಬಿದ್ದಿರುವುದು ಖಚಿತವಾಗಿದೆ. ನದಿಯ ಆಳದಲ್ಲಿರುವ ಲಾರಿ ಹೇಗಿದೆ ಎಂಬ ಬಗ್ಗೆ ಇನ್ನಷ್ಟು ಖಚಿತ ಮಾಡಿಕೊಳ್ಳುವ ಲಾರಿಯನ್ನು ತೆಗೆಯಲು ಬುಧವಾರ ಕಾರ್ಯಾಚರಣೆ ಆರಂಭಿಸಲಾಗಿದೆ.
ನೌಕಾಪಡೆಯ ಡೀಪ್ ಡೈವರ್‌ಗಳು ಬುಧವಾರವೂ ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆ ನಡೆಸಿದರು. ಸೋನಾರ್ ತಂತ್ರಜ್ಞಾನದಲ್ಲಿ ನದಿಯ ಆಳದಲ್ಲಿ ಲೋಹದ ವಸ್ತು ಇರುವುದು ಖಚಿತವಾಗಿದೆ. ಅದು ಲಾರಿಯೇ ಇರಬಹುದು ಎಂದು ಊಹಿಸಿ ನಡೆಸಿದ ಕಾರ್ಯಾಚರಣೆ ಪ್ರಾರಂಭಿಸಲಾಗಿದ್ದು, ಯಶಸ್ವಿಯಾಗುವ ಲಕ್ಷಣಗಳಿವೆ. ಸೋನಾರ್ ಅಲೆಗಳಿಗೆ ಸಿಕ್ಕಿದ ಲೋಕ ಸಾಕಷ್ಟು ಆಳದಲ್ಲಿದ್ದು, ಅದರ ಮೇಲೆ ಮಣ್ಣು ಕೂಡ ಇದೆ. ಅದನ್ನು ತೆಗೆಯುವುದು ದೊಡ್ಡ ಸವಾಲಾಗಿದೆ. 60 ಅಡಿ ಆಳದವರೆಗೆ ಮಣ್ಣು ತೆಗೆಯಬಲ್ಲ ಲಾಂಗ್ ಆರ್ಮ್ ಬೂಮರ್ ಬೆಳಗಾವಿಯಿಂದ ಶಿರೂರು ತಲುಪಿದ್ದು, ಅದರ ಮೂಲಕ ಮೂಲಕ ಮಣ್ಣು ತೆಗೆಯಲು ಬುಧವಾರ ಯತ್ನಿಸಲಾಯಿತು. ಆದರೆ, ಭಾರಿ ಮಳೆ ಹಾಗೂ ರಾಡಿಯಾದ ಮಣ್ಣಿನ ಕಾರಣ ಕಾರ್ಯಾಚರಣೆ ಕಷ್ಟವಾಗಿದೆ.
`ಬೂಮರ್ ಹೆದ್ದಾರಿಯಿಂದ ನಿಂತು ನದಿಯ ಆಳಕ್ಕೆ ತನ್ನ ಬಾಹುಗಳನ್ನು ಚಾಚುವುದು ಕಷ್ಟವಾಗುತ್ತಿದೆ. ಹಾಗಾಗಿ ಅದನ್ನು ನದಿಯ ನೀರಿನ ಮಟ್ಟದಲ್ಲಿ ನೆಲಗಟ್ಟು ಮಾಡಿ ನಿಲ್ಲಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ'  ಎಂದು ಶಾಸಕ ಸತೀಶ ಸೈಲ್ ತಿಳಿಸಿದರು.
ಬುಧವಾರ ಭೂಮರ್ ನದಿಯ ದಡದ ಮಣ್ಣನ್ನು ಸರಿಸಿದ್ದು, ಅಲ್ಲಿಂದ ಅಕೇಶಿಯಾ ನಾಟಾದ ತುಂಡುಗಳು ಎದ್ದು ಬಂದಿವೆ. ಲಾರಿಯು ೪೦ ಟನ್ ಅಕೇಶಿಯಾ ನಾಟಾಗಳನ್ನು ತುಂಬಿದ್ದರಿಂದ ಲಾರಿ ಅಲ್ಲಿಯೇ ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ. ಜು.27 ರಂದು ಕಾರ್ಯಾಚರಣೆ ಮುಂದುವರಿಯಲಿದೆ.
ಸುಧಾರಿತ ಡ್ರೋನ್ ಆಧಾರಿತ ಇಂಟೆಲಿಜೆಂಟ್ ಅಂಡರ್‌ಗ್ರೌಂಡ್ ಬರಿಡ್ ಆಬ್ಜೆಕ್ಟ್ ಡಿಟೆಕ್ಷನ್ ಸಿಸ್ಟಮ್ ಅನ್ನು ಸಹ ಹುಡುಕಾಟಕ್ಕಾಗಿ ನಿಯೋಜಿಸಲಾಗುತ್ತಿದೆ. ಕೋಸ್ಟ್ಗಾರ್ಡ್ ಹೆಲಿಕಾಫ್ಟರ್ ಸಹ ಎಂದು ಕಂದಾಯ ಸಚಿವ ಕೃಷ್ಣ ಬೈರೆಗೌಡ ತಮ್ಮ ಎಕ್ಸ್ ಖಾತೆಯ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.