ಜಿಲ್ಲೆ

ಸಂಸ್ಥಾನದ ಬೆಳವಣಿಗೆಯ ಕನಸು ಕಂಡಿದ್ದ ಶಿರಸಂಗಿ ಲಿಂಗರಾಜರು

ಅಂಕೋಲಾ: ಶಿರಸಂಗಿ ಲಿಂಗರಾಜರು ರಾಜರ್ಷಿಗಳ ಪರಂಪರೆ ಹೊಂದಿದ್ದು, ಸಂಸ್ಥಾನದ ಬೆಳವಣಿಗೆಯ ಕನಸು ಕಂಡು ಕೃಷಿ, ಪಶುಸಂಗೋಪನೆ, ಕೆರೆ ನಿರ್ವ ಣದಂತ ಸಾಮಾಜಿಕ ಕಾರ್ಯದ ಜತೆಗೆ ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕೆ ಪಣತೊಟ್ಟ ಮಹಾನ್ ಮೇಧಾವಿಯಾಗಿದ್ದಾರೆ ಎಂದು ಜಿ.ಸಿ. ಕಾಲೇಜ್ ಪ್ರಾಚಾರ್ಯ ಡಾ.ಎಸ್.ವಿ. ವಸ್ತ್ರದ ಹೇಳಿದರು.

ಸ್ಥಳೀಯ ಕೆಎಲ್​ಇ ಸಮೂಹ ಸಂಸ್ಥೆಗಳು ಶುಕ್ರವಾರ ಆಯೋಜಿಸಿದ್ದ ತ್ಯಾಗವೀರ ಶಿರಸಂಗಿ ಲಿಂಗರಾಜರ 164ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆಎಲ್​ಇ ಸಂಸ್ಥೆ ಕೂಡ ದಾನ ಪರಂಪರೆಯಿಂದ ಬೆಳೆದಿದೆ. ದಾನ ಮಾಡಿದ ಪ್ರತಿಯೊಬ್ಬರುನ್ನೂ ಸ್ಮರಿಸುವ ಸಂಸ್ಕೃಯಲ್ಲಿ ಮುಂಚೂಣಿಯಲ್ಲಿದ್ದು, ಅದರಿಂದ ಜಾಗತಿಕ ಮನ್ನಣೆಗಳಿಸುತ್ತಿದೆ. ಆದ್ದರಿಂದ ದೂರ ದೃಷ್ಟಿಯಿಂದ, ಸ್ವಾರ್ಥವಿಲ್ಲದೆ, ಬದ್ಧತೆಯಿಂದ ಕೆಲಸ ಮಾಡಬೇಕು ಎಂದರು.

ಕೆಎಲ್​ಇ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಡಾ.ಡಿ.ಎಲ್. ಭಟ್ಕಳ ಮಾತನಾಡಿ, ಶಿರಸಂಗಿ ಲಿಂಗರಾಜರು ಅಲ್ಪಕಾಲಾವಧಿ ಬದುಕಿದರೂ ಸಂಸ್ಥಾನವನ್ನು ಶಾಶ್ವತವಾಗಿ ನೆನಪಿಡುವಂತೆ ಮಾಡಿದರು. ಯಾವುದೇ ಸಂಸ್ಥೆ ದಾನ ಪಡೆದದ್ದನ್ನು ಸರಿಯಾಗಿ ಬಳಕೆ ಮಾಡಿಕೊಂಡಾಗ ಸಂಸ್ಥೆ ಬೆಳೆಯುತ್ತದೆ. ಆ ಕೆಲಸವನ್ನು ಕೆಎಲ್​ಇ ಮಾಡಿದೆ ಎಂದರು.

ಕೆಎಲ್​ಇ ಸಂಸ್ಥೆಯ ಸಂಯೋಜಕ ಆರ್. ನಟರಾಜ ಅಧ್ಯಕ್ಷತ ೆವಹಿಸಿ ಮಾತನಾಡಿ, ಶಿರಸಂಗಿ ಲಿಂಗರಾಜ ರು ಮರಣದಲ್ಲಿಯೂ ಚಿರಸ್ಥಾಯಿಯಾಗಿ ಉಳಿಯುತ್ತಾರೆ. ಇಂತಹ ಮಾನವೀಯ ಪುರುಷರ ಸಾರ್ಥಕ ಸಾಧನೆ, ತ್ಯಾಗ, ಪ್ರೇರಣೆ ಆಗಬೇಕು ಎಂದರು. ಸಂಸ್ಥೆಗಳ ಸದಸ್ಯೆ ಡಾ. ಮೀನಲ್ ನಾರ್ವೇಕರ ಉಪಸ್ಥಿತರಿದ್ದರು. ವಿ.ಕೆ. ಹೈಸ್ಕೂಲಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪಿ.ಯು.ಪ್ರಾಚಾರ್ಯ ಸೋಮಶೇಖರ ನಾಯಕ ಸ್ವಾಗತಿಸಿದರು, ಪ್ರಾಚಾರ್ಯ ಅಶ್ವತ್ಥನಾರಾಯಣ ಹೆಗಡೆ ಪರಿಚಯಿಸಿದರು. ಕೌಟುಂಬಿಕ ಸಲಹಾ ಕೇಂದ್ರದ ಮುಖ್ಯ ಸಲಹೆಗಾರ ತಿಮ್ಮಣ್ಣ ಭಟ್ಟ, ಉಪನ್ಯಾಸಕಿ ಜಯಾ ಗಾಂವಕರ ನಿರ್ವಹಿಸಿದರು.