ಜಿಲ್ಲೆ

ಪಶುವೈದ್ಯರ ಕೊರತೆ ತುಂಬಲು ಗ್ರಾಮಸಭೆಯಲ್ಲಿ ಆಗ್ರಹ

ಸುನಿಲ್ ಪೊನ್ನೇಟಿ

ಕುಶಾಲನಗರ:

ಶಿರಂಗಾಲ ಸುತ್ತಮುತ್ತಲಿನ ಗ್ರಾಮದಲ್ಲಿ ರೈತರು ಕೃಷಿಯೊಂದಿಗೆ ಪಶುಸಂಗೋಪನೆ ಕೈಗೊಂಡಿದ್ದಾರೆ. ಆದರೆ ಪಶು ಆಸ್ಪತ್ರೆಯಲ್ಲಿ ಪಶು ವೈದ್ಯರಿಲ್ಲದೆ ತುಂಬಾ ತೊಂದರೆ ಆಗಿದೆ. ಆದ್ದರಿಂದ ಆಸ್ಪತ್ರೆಗೆ ಖಾಯಂ ಪಶುವೈದ್ಯರನ್ನು ನೇಮಕ ಮಾಡಬೇಕು ಎಂದು ಶುಕ್ರವಾರ ನಡೆದ ಶಿರಂಗಾಲ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.

ಪಂಚಾಯತಿ ಸಭಾಂಗಣದಲ್ಲಿ ಅಧ್ಯಕ್ಷೆ ಎಂ.ಆರ್. ಲತಾಬಾಯಿ ಅಧ್ಯಕ್ಷತೆಯಲ್ಲಿ ನಡೆದ 2025-26ನೇ ಸಾಲಿನ ಕೊನೆಯ ಗ್ರಾಮಸಭೆಯಲ್ಲಿ ರೈತರಾದ ಜವರೇಗೌಡ, ಸುರೇಶ್ ಮಾತನಾಡಿ ಹೈನುಗಾರಿಕೆ ಹಾಗೂ ಪಶುಸಂಗೋಪನೆ ರೈತರ ಜೀವನಾಡಿಯಾಗಿದೆ. ಲಕ್ಷಾಂತರ ರೂ. ಹಣ ನೀಡಿ ಖರೀದಿಸಿ ತಂದ ಹಸುಗಳಿಗೆ ಸೂಕ್ತ ಚಿಕಿತ್ಸೆ ದೊರೆಯದೆ ತೊಂದರೆಯಾಗಿದೆ. ದನಕರುಗಳ ಯೋಗಕ್ಷೇಮಕ್ಕೆ ದೂರದ ಊರುಗಳ ವೈದ್ಯರನ್ನು ಅವಲಂಬಿಸಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಹೆಬ್ಬಾಲೆ ಪಶು ಆಸ್ಪತ್ರೆಯ ಡಾ. ಅಮೃತಾ ಮಾತನಾಡಿ, ತಾಲೂಕಿನಲ್ಲಿ ಕೇವಲ ಇಬ್ಬರೇ ಪಶುವೈದ್ಯರಿದ್ದು ರೈತರು ತಮ್ಮ ಜಾನುವಾರುಗಳಿಗೆ ಅನಾರೋಗ್ಯ ಸಂದರ್ಭ ಮಾಹಿತಿ ನೀಡಿದರೆ ಖುದ್ದು ಬಂದು ಚಿಕಿತ್ಸೆ ನೀಡುವುದಾಗಿ ಹೇಳಿದರು.

ಚಿಕ್ಕನಾಯಕನಹೊಸಳ್ಳಿಯಲ್ಲಿ ಚಿರತೆ ಕಂಡುಬAದಿದ್ದು, ಇದರಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ಆದ್ದರಿಂದ ಚಿರತೆ ಸೆರೆಗೆ ಅರಣ್ಯ ಇಲಾಖೆ ಕೂಡಲೇ ಬೋನ್ ಅಳವಡಿಸಿ ಕಾರ್ಯಾಚರಣೆ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಸದಸ್ಯ ಎನ್.ಎಂ. ಧರ್ಮಪ್ಪ ಮಾತನಾಡಿ, ಹಗಲಿನಲ್ಲಿ ಚಿರತೆ ತನ್ನ ಮರಿಗಳೊಂದಿಗೆ ಓಡಾಡುವುದನ್ನು ಗ್ರಾಮಸ್ಥರು ನೋಡಿ ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಬೋನ್ ಅಳವಡಿಸಿ ಚಿರತೆ ಸೆರೆಹಿಡಿದು ಗ್ರಾಮಸ್ಥರ ಆತಂಕವನ್ನು ದೂರ ಮಾಡಬೇಕು ಎಂದು ಒತ್ತಾಯಿಸಿದರು.

ಸದಸ್ಯೆ ಸರಿತಾ ಮಾತನಾಡಿ, ಮಣಜೂರು ಸುತ್ತಮುತ್ತ ಮಂಗಗಳ ಕಾಟ ಜಾಸ್ತಿ ಆಗಿದೆ. ತೆಂಗು, ಬಾಳೆ, ಜೋಳ ಸೇರಿದಂತೆ ರೈತರ ಕೃಷಿಯನ್ನು ಹಾಳುಮಾಡುತ್ತಿವೆ. ಆದ್ದರಿಂದ ಮಂಗಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಸಿಬ್ಬಂದಿಗಳಿಗೆ ತಿಳಿಸಿದರು. ಮಣಜೂರು ಕಲಾಭವನ ಕಾಮಗಾರಿ ಮುಗಿದು ಏಳೆಂಟು ವರ್ಷಗಳೇ ಕಳೆದರೂ ಗುತ್ತಿಗೆದಾರ ಗ್ರಾಮಸ್ಥರಿಗೆ ಹಸ್ತಾಂತರ ಮಾಡಿಲ್ಲ ಎಂದು ಗ್ರಾಮ ಸಮಿತಿ ಅಧ್ಯಕ್ಷ ರಾಜಶೇಖರ್ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಸಂಬAಧಿಸಿದ ಅಧಿಕಾರಿಗಳಿಗೆ ಪತ್ರ ಬರೆದು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಿಡಿಒ ತಿಳಿಸಿದರು.

ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹೇಮಲತಾ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಗೆ ಕಾಮಗಾರಿಗಳನ್ನು ಸೇರ್ಪಡೆ ಮಾಡಬೇಕಾಗಿದೆ. ಮೊದಲು ಆನ್‌ಲೈನ್ ಮೂಲಕ ಮಾಡಲಾಗುತ್ತಿತ್ತು. ಆದರೆ ಈಗ ಪ್ರತ್ಯೇಕ ತಂತ್ರಾAಶ ಮೂಲಕ ಸಲ್ಲಿಸಬೇಕಾಗಿದೆ. ಗ್ರಾಮಸ್ಥರು ಮತ್ತು ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ನೀಡಬೇಕು. ಗ್ರಾಮಸ್ಥರು ಕೂಡ ಅರ್ಜಿ ಸಲ್ಲಿಸಬೇಕು. ಪಂಚಾಯತಿ ವತಿಯಿಂದ ಕುರಿ, ಕೋಳಿ, ಹಸು ಸಾಕಾಣಿಕೆ ಕೊಟ್ಟಿಗೆಗೆ ಧನಸಹಾಯ ನೀಡಲಾಗುತ್ತಿದೆ.

ರೈತರು ಅರ್ಜಿ ಸಲ್ಲಿಸಬಹುದು. ಗ್ರಾಮಸ್ಥರು ತಮ್ಮ ಕೃಷಿ ಭೂಮಿಯನ್ನು ಮನೆದಳ ಅಂತ ಪರಿವರ್ತನೆ ಮಾಡಿದವರಿಗೆ ಎ ಖಾತಾ ಕೊಡಬಹುದು. ಪಂಚಾಯತಿ ವತಿಯಿಂದ ಪ್ರಸಕ್ತ ವರ್ಷ ಕಂದಾಯ ಪರಿಷ್ಕರಣೆ ಮಾಡಲಾಗುತ್ತಿದೆ. ಗ್ರಾಮಸ್ಥರು ನಿಗದಿತ ಅವದಿಯಲ್ಲಿ ಕಂದಾಯ ಪಾವತಿ ಮಾಡಿ ಗ್ರಾಮದ ಅಭಿವೃದ್ಧಿ ಕೈಜೋಡಿಸಬೇಕು ಎಂದು ಹೇಳಿದರು.

ಪಂಚಾಯತಿ ಅಧ್ಯಕ್ಷೆ ಎಂ.ಆರ್. ಲತಾಬಾಯಿ ಮಾತನಾಡಿ, ಸರ್ಕಾರದಿಂದ ಬಂದ ಅನುದಾನವನ್ನು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡುವ ಮೂಲಕ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ರಸ್ತೆ, ಚರಂಡಿ, ಬೀದಿ ದೀಪ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಪಂಚಾಯತಿಯಿAದ ಒದಗಿಸಲಾಗಿದೆ ಎಂದರು.

ನೋಡೆಲ್ ಅಧಿಕಾರಿ ತೋಟಗಾರಿಕಾ ಹಿರಿಯ ನಿರ್ದೇಶಕ ಎನ್.ಎಸ್. ಫಣೇಂದ್ರ, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ಧರ್ಮಪ್ಪ, ಶ್ರೀಕಾಂತ್, ಪ್ರದೀಪ್, ಸರಿತಾ, ಗೀತಾ, ಲಕ್ಷಿö್ಮÃ, ಕಾರ್ಯದರ್ಶಿ ಮಂಜೂರು ಖಾನ್ ಹಾಗೂ ಸಿಬ್ಬಂದಿ ಇದ್ದರು. ಇದೇ ಸಂದರ್ಭ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆ ವತಿಯಿಂದ ದೊರೆಯುವ ಸೌಲಭ್ಯಗಳ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಿದರು.