ಭಟ್ಕಳ: ಹೋಳಿ ಹಬ್ಬದಲ್ಲಿ ಸಂಗ್ರಹಿಸಿದ ಹಣವನ್ನು ಶಿರಾಲಿಯ ಆಟೋ ಚಾಲಕರು 6 ವರ್ಷದ ಕ್ಯಾನ್ಸರ್ ಪೀಡಿತ ಮಗುವಿಗೆ ನೀಡಿ ಮಾನವೀಯತೆ ಮೆರೆದಿದ್ದು, ಈ ರೀತಿಯಲ್ಲೂ ಸಹಾಯ ಮಾಡಬಹುದು ಎಂಬುದನ್ನು ನಿರೂಪಿಸಿದ್ದಾರೆ.
ಶಿರಾಲಿಯ ತಟ್ಟಿಹಕ್ಕಲ್ ನಿವಾಸಿ ಆರು ವರ್ಷದ ಯಶ್ಚಿತಾ ಲಕ್ಷ್ಮಣ ದೇವಾಡಿಗ ದುರ್ದೈವವಶಾತ್ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಈಕೆಯದು ತೀರಾ ಬಡತನದ ಕುಟುಂಬವಾಗಿದ್ದು, ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲ ದಾನಿಗಳು ಪುಟಾಣಿಯ ಚಿಕಿತ್ಸೆಗೆ ಧನಸಹಾಯ ಮಾಡುತ್ತಿದ್ದಾರೆ. ಅದೇ ರೀತಿ ಶಿರಾಲಿಯ ಆಟೋ ಚಾಲಕರು ಹೋಳಿ ಹಬ್ಬದಂದು ಸಂಗ್ರಹಿಸಿದ 25,260 ರೂ.ಗಳನ್ನು ಯಶ್ಚಿತಾಳ ಮನೆಗೆ ತೆರಳಿ ಹಣ ನೀಡಿ ಮಾನವೀಯತೆ ಮೆರೆದಿದ್ದಾರೆ.
ದಾಸ ನಾಯ್ಕ, ಪರಶುರಾಮ್ ನಾಯ್ಕ, ಶಿವಾನಂದ ನಾಯ್ಕ, ಕೇಶವ ನಾಯ್ಕ, ಪರಮೇಶ್ವರ ದೇವಾಡಿಗ, ತಿಮಪ್ಪ ನಾಯ್ಕ, ಕುಪ್ಪ ನಾಯ್ಕ, ನಾಗರಾಜ ದೇವಾಡಿಗ, ಮಾದೇವ ನಾಯ್ಕ, ಪಾಂಡು ದೇವಾಡಿಗ, ವಸಂತ ದೇವಾಡಿಗ, ಸುರೇಂದ್ರ, ಗಣಪತಿ ನಾಯ್ಕ, ಅಣ್ಣಪ್ಪ ನಾಯ್ಕ, ಈಶ್ವರ ನಾಯ್ಕ,, ಪಾಂಡು ದೇವಾಡಿಗ, ರಾಮಚಂದ್ರ ನಾಯ್ಕ, ಯೋಗೇಶ ನಾಯ್ಕ ಹಾಗೂ ಆಟೋ ಚಾಲಕರು, ಮಾಲೀಕರು ಉಪಸ್ಥಿತರಿದ್ದರು.