ಜಿಲ್ಲೆ

ಶಿರಾಳಕೊಪ್ಪದಲ್ಲಿ ಉದ್ಯಮಿ ಕೊಲೆಗೈದಿದ್ದ ಮೇಸ್ತ್ರಿ ಸೆರೆ

ಶಿವಮೊಗ್ಗ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಶಿರಾಳಕೊಪ್ಪದಲ್ಲಿ ಚಾಕು ಇರಿದು ಉದ್ಯಮಿ ಕೊಲೆ ಮಾಡಿದ್ದ ಮೇಸ್ತ್ರಿಯನ್ನು

ಪೊಲೀಸರು ಸೊರಬ ತಾಲೂಕಿನ ಗೇರುಕೊಪ್ಪದ ಕ್ರಾಸ್ ಬಳಿ ಶುಕ್ರವಾರ ಬಂಧಿಸಿದ್ದಾರೆ.

ಸೊರಬ ತಾಲೂಕು ಚನ್ನಾಪುರದ ಕೋಟೇಶ್ ಅಲಿಯಾಸ್ ಕೋಟೇಶ್ವರ (42) ಬಂಧಿತ ಮೇಸ್ತ್ರಿ. ಆ.27ರಂದು ಬೆಳಗ್ಗೆ ಶಿರಾಳಕೊಪ್ಪ

ಪಟ್ಟಣದ ಗಾಂಧಿನಗರದ ಉದ್ಯಮಿ ಎ.ಆರ್.ದಯಾನಂದ್ (69) ಮತ್ತು ಅವರ ಪುತ್ರ ರಾಘವೇಂದ್ರ (42) ಮೇಲೆ ಚಾಕುವಿನಿಂದ

ಇರಿದು ಗಾಯಗೊಳಿಸಿದ್ದ. ಕೃತ್ಯದಲ್ಲಿ ದಯಾನಂದ್ ಅವರು ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದರು. ರಾಘವೇಂದನನ್ನು

ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ರಾಘವೇಂದ್ರ ಚೇತರಿಸಿಕೊಳ್ಳುತ್ತಿದ್ದು ಕೃತ್ಯದ ಬಳಿಕ ಕೋಟೇಶ್ ತಲೆಮರೆಸಿಕೊಂಡಿದ್ದ. ಆತನ ಬಂಧನಕ್ಕೆ ಪೊಲೀಸರು ವಿಶೇಷ

ತಂಡವನ್ನು ರಚಿಸಲಾಗಿತ್ತು. ಶುಕ್ರವಾರ ಬೆಳಗ್ಗೆ ಗೇರುಕೊಪ್ಪದ ಕ್ರಾಸ್ ಬಳಿಕ ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಶಿಕಾರಿಪುರ ಡಿವೈಎಸ್ಪಿ ಶಿವಾನಂದ ಮದರಖಂಡಿ ಮಾರ್ಗದರ್ಶನದಲ್ಲಿ ಸಿಪಿಐ ಜೆ.ಲಕ್ಷ್ಮಣ್, ಶಿರಾಳಕೊಪ್ಪ ಪಿಎಸ್‌ಐ ಟಿ.ರಮೇಶ್,

ಸಿಬ್ಬಂದಿಗಳಾದ ಕವಿತಾ, ಬಿ.ಶಿವಾನಂದ್, ಸಂತೋಷ್, ಶಿವಮೂರ್ತಿ, ಕುಮಾರನಾಯ್ಕ, ಹಾಲೇಶ್, ಅಶೋಕ್,

ಆರ್.ಮಂಜುನಾಥ, ರವಿನಾಯ್ಕ, ಶಿವಶಂಕರ್ ಬಾರ್ಕಿ, ಶ್ರೀಧರ್, ದೇವರಾಜ್, ಕಾಂತೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಏನಿದು ಪ್ರಕರಣ ?: ಉದ್ಯಮಿ ಎ.ಆರ್.ದಯಾನಂದ್ ಅವರು ಶಿಕಾರಪುರ ರಸ್ತೆಯಲ್ಲಿ ಹೊಸ ಕಟ್ಟಡ ಕಟ್ಟಿಸುತ್ತಿದ್ದರು. ಅದರ

ಜವಾಬ್ದಾರಿಯನ್ನು ಮೇಸ್ತ್ರಿ ಕೋಟೇಶ್ ವಹಿಸಿಕೊಂಡಿದ್ದ. ಕೆಲಸ ಸರಿಯಾಗಿ ನಿರ್ವಹಣೆ ಮಾಡದ್ದಕ್ಕೆ ಗುತ್ತಿಗೆ ಸ್ಥಗಿತಗೊಳಿಸಿದ್ದರು.

ಅಲ್ಲಿವರೆಗೂ ಮಾಡಿಸಿದ ಕೆಲಸದ ಬಾಕಿ ಹಣ ಕೊಡುವಂತೆ ಕೋಟೇಶ್, ಕಟ್ಟಡ ಮಾಲೀಕ ದಯಾನಂದ್ ಅವರಲ್ಲಿ ಕೇಳಿದ್ದ.

ಆ.27ರಂದು ಇದೇ ವಿಚಾರದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಹಣ ಕೊಡದೇ ಸತಾಯಿಸಿದ್ದೆಂಬ ಕಾರಣಕ್ಕೆ

ಸಿಟ್ಟಿಗೆದ್ದ ಕೋಟೇಶ್ ಅವಾಚ್ಯ ಶಬ್ದಗಳಿಂದ ನಿಂದಿಸಿ ದಯಾನಂದ್ ಅವರ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದ. ಬಳಿಕ ಪುತ್ರ

ರಾಘವೇಂದ್ರನಿಗೂ ಎಡಗೈ ಮತ್ತು ಎದೆಗೆ ಇರಿದಿದ್ದ. ಕೃತ್ಯದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ. ದಯಾನಂದ್ ಅವರ ಆಸ್ಪತ್ರೆಗೆ

ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದರು. ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಕೋಟೇಶ್ ಬಂಧನಕ್ಕೆ

ಜಾಲ ಬೀಸಿದ್ದರು. ಆದರೂ ತಲೆಮರೆಸಿಕೊಂಡು ಓಡಾಡುತ್ತಿದ್ದ ಆತನ ಬಗ್ಗೆ ಖಚಿತ ಮಾಹಿತಿ ಪಡೆದು ಬಂಧಿಸಿದ್ದಾರೆ. ಶಿರಾಳಕೊಪ್ಪ

ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.