ಶಿರಹಟ್ಟಿ: ತಾಲೂಕಿನ ಶ್ರೀಮಂತಗಡದ ಆದಿಶಕ್ತಿ ಹೊಳಲಮ್ಮದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅ.3ರಿಂದ 12ರವರೆಗೆ ಜರುಗಲಿದೆ. ನಿತ್ಯ ಸಂಜೆ 7ರಿಂದ ಶ್ರೀ ಹೊಳಲಮ್ಮದೇವಿ ಪಾರಾಯಣ ಹಮ್ಮಿಕೊಳ್ಳಲಾಗಿದೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ದುತ್ತರವಾಂವನ ಮನಿಪ್ರ ಕೊರಣೇಶ್ವರ ಮಹಾಸ್ವಾಮೀಜಿಗಳು ಪ್ರವಚನ ನೀಡಲಿದ್ದಾರೆ. ಪ್ರಕಾಶ ಶಿವಬಸಪ್ಪ ಮೇಟಿ ಅವರಿಂದ ಪುರಾಣ ಪಠಣ, ಹಾಮೋನಿಯಂನಲ್ಲಿ ವಿಠೋಬ ಕಾಶಣ್ಣವರ, ತಬಲಾದಲ್ಲಿ ಜಗನ್ನಾಥ ವಿನಾಯಕ ಹಣಗಿ ಸಾಥ್ ನೀಡಲಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಕಮಿಟಿ ಅಧ್ಯಕ್ಷ ದಾಮೋಜಿ ತೆಗ್ಗಿಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.