ಜಿಲ್ಲೆ

ಶಿರಾಡಿ ಸುರಂಗ ಮಾರ್ಗ ಯೋಜನೆಗೆ ಕೇಂದ್ರ ಅನುಮತಿ

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವೇದವ್ಯಾಸ ಕಾಮತ್‌, ಡಾ.ಭರತ್‌ ಶೆಟ್ಟಿ, ರಾಜೇಶ್‌ನಾಯ್ಕ್‌ ಉಳಿಪಾಡಿ, ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ಸಿಂಹ ನಾಯಕ್‌, ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ, ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಶಿಶು ಮೋಹನ್‌ ಮುಂತಾದವರಿದ್ದರು

ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಸಂಸದ ನಳಿನ್‌ ಕುಮಾರ್‌ ಕಟೀಲ್‌, ಗುರುಪುರ ನೂತನ ಸೇತುವೆಯ ಉದ್ಘಾಟನೆ ಸೇರಿದಂತೆ ಒಟ್ಟು ಜಿಲ್ಲೆಗೆ ಸಂಬಂಧಿಸಿದಂತೆ ೫೧೪.೨೪ ಕೋಟಿ ರೂ.ನ ಯೋಜನೆಗೆ ಚಾಲನೆ ಸಿಕ್ಕಿದೆ. ಬಿ.ಸಿ.ರೋಡ್‌-ಅಡ್ಡಹೊಳೆ, ಕುಲಶೇಖರ-ಕಾರ್ಕಳ ಹೆದ್ದಾರಿ ಕೆಲಸವೂ ಶೀಘ್ರ ಟೆಂಡರ್‌ಗೆ ಬರಲಿದೆ ಎಂದರು.

ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಪ್ರಲ್ಹಾದ ಜೋಶಿ ಪಾಲ್ಗೊಂಡು ಮಾತನಾಡಿದರು.

ಶಿರಾಡಿ ಘಾಟ್‌ನ ಹೆದ್ದಾರಿಯ ಕಣಿವೆ ಕಡೆಗೆ ೩೬.೫ ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣ, ಚಾರ್ಮಾಡಿ ಘಾಟ್‌ ರಸ್ತೆ ಕಣಿವೆ ಭಾಗಕ್ಕೆ ೧೯.೩೬ ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣ, ಸಂಪಾಜೆ ಘಾಟ್‌ ವಿಭಾಗದಲ್ಲಿ ರಿಟೈನಿಂಗ್‌ ವಾಲ್‌ ಇತ್ಯಾದಿ ಸೇರಿದಂತೆ ೫೮.೮೪ ಕೋಟಿ ರೂ ವೆಚ್ಚದ ಕೆಲಸ ಹಾಗೂ ೬೯.೦೨ ಕೋಟಿ ರೂ. ವೆಚ್ಚದ ಕೂಳೂರು ಷಟ್ಪಥ ಸೇತುವೆ ಕೆಲಸಗಳಿಗೆ ಶಿಲಾನ್ಯಾಸ ನೆರವೇರಿಸಿದರು.

ವಿಡಿಯೊ ಕಾನ್ಫರೆನ್ಸ್‌ ಮೂಲಕ ದ.ಕ ಜಿಲ್ಲೆಯ ವ್ಯಾಪ್ತಿಗೆ ಸೇರಿದ ೫ ಯೋಜನೆ ಸೇರಿದಂತೆ ಒಟ್ಟು ೧೦,೯೦೪ ಕೋಟಿ ರೂ. ಅಂದಾಜು ವೆಚ್ಚದ ಹೆದ್ದಾರಿ ಯೋಜನೆಗಳಿಗೆ ಶಿಲಾನ್ಯಾಸ ಹಾಗೂ ಉದ್ಘಾಟನೆಯನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ನೆರವೇರಿಸಿ ಮಾತನಾಡಿದರು.

೧೦ ಸಾವಿರ ಕೋಟಿ ರೂ. ಅಂದಾಜು ವೆಚ್ಚದ ಈ ಯೋಜನೆಗೆ ಒಪ್ಪಿಗೆ ನೀಡಲಾಗಿದ್ದು ಬೇಗ ಇದರ ಟೆಂಡರ್‌ ಮತ್ತಿತರ ಪ್ರಕ್ರಿಯೆಗಳು ನಡೆಯಲಿವೆ ಎಂದು ಕೇಂದ್ರ ಭೂಸಾರಿಗೆ, ಹೆದ್ದಾರಿಖಾತೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ಮಂಗಳೂರು: ಮಹಾತ್ವಾಕಾಂಕ್ಷೆಯ ಶಿರಾಡಿ ಸುರಂಗಮಾರ್ಗದ ಯೋಜನಾ ವರದಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.