ಜಿಲ್ಲೆ

ಹಣ ಸಹಾಯ ನೀಡುವ ಜತೆಗೆ ಮತ ನೀಡುವವರು ಶಿರಾ ಜನ

ಶಿರಾ: ಉಪಚುನಾವಣೆ ಹಣದ ಆಮಿಷದ ವಿರುದ್ಧ ಮಾನವೀಯತೆಯ ಪ್ರಶ್ನೆಯಾಗಿದೆ, ಇವೆರಡರಲ್ಲಿ ವಾನವೀಯತೆ ಉಳಿಯುತ್ತದೆಯೆಂಬ ಭರವಸೆಯಿದೆ ಎಂದು ವಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ಶಿರಾದಲ್ಲಿ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 30 ವರ್ಷದ ಶಿರಾ ರಾಜಕೀಯದಲ್ಲಿ ದಿವಂಗತ ಶಾಸಕ ಬಿ.ಸತ್ಯನಾರಾಯಣರ ಅವರನ್ನು ಬೆಳೆಸಿದ್ದು ಈ ತಾಲೂಕಿನ ಜನತೆ. ಹಣ ಸಹಾಯ ನೀಡುವ ಜತೆಗೆ ಮತವನ್ನೂ ನೀಡುವಂತಹ ಮುಗ್ಧ ಮತದಾರರಿರುವ ರಾಜ್ಯದ ಏಕೈಕ ಕ್ಷೇತ್ರವೆಂದರೆ ಅದು ಶಿರಾ ವಿಧಾನಸಭಾ ಕ್ಷೇತ್ರ ಎಂದರು.

65 ಕೆರೆಗಳಿಗೆ ನೀರು ಹರಿಸುವಂತಹ ನೀರಾವರಿ ಯೋಜನೆಗೆ ಡಿಪಿಆರ್ ಸರ್ವೇ ವಾಡಲು ಸೀಕಾನ್ ಎನ್ನುವ ಸಂಸ್ಥೆಗೆ ಆದೇಶ ನೀಡಿದ್ದೇ ಅಂದಿನ ಮುಖ್ಯಮಂತ್ರಿಯಾದ ಎಚ್.ಡಿ.ಕುವಾರಸ್ವಾಮಿ. ಆ ಸಂದರ್ಭದಲ್ಲಿ ಬಿ.ಸತ್ಯನಾರಾಯಣ ಅಧಿಕಾರದಲ್ಲಿದ್ದರು. ನಾನು ಲೋಕೋಪಯೋಗಿ ಸಚಿವನಾಗಿದ್ದಾಗ ರಸ್ತೆ ಅಭಿವೃದ್ಧಿಗೆ 180 ಕೋಟಿ ಅನುದಾನ ಬಿಡುಗಡೆ ವಾಡಿದ್ದೇನೆ. ಸುವಾರು 800 ಕಿ.ಮಿ ಗ್ರಾವಾಂತರ ರಸ್ತೆಗಳನ್ನ ಜಿಲ್ಲಾ ರಸ್ತೆಗಳಾಗಿ ಮೇಲ್ದರ್ಜೆಗೇರಿಸಿ ಅನುದಾನ ನೀಡಲಾಗಿದೆ ಎಂದರು.

ಈ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಕ್ಕೆ ನಾಲ್ಕು ಪಟ್ಟು ಹೆಚ್ಚು ವಾಡಿ ರೈತರ ಬಾಳಿಗೆ ಬರೆ ಎಳೆದಿದೆ, ಈ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಹೆಚ್ಚಿನ ಮತಗಳನ್ನು ನೀಡಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು.