ಜಿಲ್ಲೆ

ದರೋಡೆಗೆ ಹೊಂಚು ಹಾಕುತ್ತಿದ್ದ ಇಬ್ಬರ ಬಂಧನ

ಶಿವಮೊಗ್ಗ: ಗೋಪಾಳದಿಂದ ಅನುಪಿನಕಟ್ಟೆಗೆ ಹೋಗುವ ಮಾರ್ಗದಲ್ಲಿ ಚಾನೆಲ್ ನ ಸೇತುವೆ ಬಳಿ ಮಾರಕಾಸ್ತ್ರ ಹಿಡಿದು ದರೋಡೆಗೆ ಹೊಂಚು ಹಾಕುತ್ತಿದ್ದ ಇಬ್ಬರನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ್ದು, 100 ಗ್ರಾಂ ಖಾರದಪುಡಿ, ಕಬ್ಬಿಣದ ರಾಡು, ಚಾಕು ಹಾಗೂ ಬೈಕ್ ನ್ನು ಜಪ್ತಿ ಮಾಡಿದ್ದಾರೆ.

ಜೆ.ಪಿ.ನಗರದ ಜುಬೇರ್ ಮತ್ತು ಸಾಧಿಕ್ ಶೇಖ್ ಎಂಬುವರನ್ನು ಬಂಧಿಸಲಾಗಿದೆ. ಕುಲ್ಡ ರಿಯಾಜ್, ನೇಪಾಳಿ ಸಲ್ಮಾನ್ ಮತ್ತು ಇಂಗ್ಲೀಶ್ ವಾಸ ಎಂಬುವರು ಪರಾರಿಯಾಗಿದ್ದಾರೆ.

ಡಿವೈಎಸ್ಪಿ ಉಮೇಶ್ ನಾಯ್ಕ್ ಹಾಗೂ ಸಿಪಿಐ ಸಂಜೀವ್ ಕುಮಾರ್  ಮಾರ್ಗದರ್ಶನದಲ್ಲಿ ತುಂಗ ನಗರ ಠಾಣೆಯ ಪಿಎಸ್ಐ ತಿರುಮಲೇಶ್ ಸಿಬ್ಬಂದಿಗಳಾದ ಸಯ್ಯಾದ್ ಇಮ್ರಾನ್, ಗುರುನಾಯ್ಕ್.ಆರ್, ಲಂಕೇಶ್ ಹಾಗೂ ಅರುಣ್ ಕುಮಾರ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.