ಶಿವಮೊಗ್ಗ: ನಗರದ ಗುತ್ಯಪ್ಪ ಕಾಲನಿಯಲ್ಲಿ ಮನೆ ಬಾಗಿಲಿನ ಬೀಗ ಮುರಿದು ಬಂಗಾರದ ಸರ ಕಳವು ಮಾಡಿದ್ದ ಮೂವರನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ್ದು 1 ಲಕ್ಷ ರೂ. ಮೌಲ್ಯದ 27 ಗ್ರಾಂ ಬಂಗಾರದ ಸರ ಮತ್ತು ಕೃತ್ಯಕ್ಕೆ ಬಳಸಿದ ಬೈಕ್‌ನ್ನು ಜಪ್ತಿ ಮಾಡಿದ್ದಾರೆ.
ತಾಲೂಕಿನ ನುಗ್ಗಿ ಮಲ್ಲಾಪುರದ ಮಹಮ್ಮದ್ ಅಸ್ಲಾಂ (19), ಆಲ್ಕೊಳದ ಸಾದಿಕ್ (18) ಮತ್ತು ಮಿಳ್ಳಘಟ್ಟದ ರೋಷನ್‌ಕುಮಾರ್ (21) ಬಂಧಿತರು. ಜೂ.28ರಂದು ರಾತ್ರಿ ಗುತ್ಯಪ್ಪ ಕಾಲನಿ 3ನೇ ಕ್ರಾಸ್‌ನ ವಿನಾಯಕ್ ಎಂಬುವರ ಮನೆ ಬೀಗ ಮುರಿದು 27 ಗ್ರಾಂ ಬಂಗಾರದ ಸರ ಕಳ್ಳತನ ಮಾಡಿದ್ದರು. ಈ ಬಗ್ಗೆ ವಿನಾಯಕ ಅವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ಕೇ ದಿನದಲ್ಲಿ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.