ಜಿಲ್ಲೆ

ದ್ವಿತೀಯ ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ

ಸೊರಬ(ಶಿವಮೊಗ್ಗ): ತಾಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಶುಕ್ರವಾರ ದ್ವಿತೀಯ ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮದ ನಾಗರಾಜ್ ಮರಡಿ ಅವರ ಪುತ್ರಿ ಸುಚಿತ್ರಾ (17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಹೊಟ್ಟೆ ನೋವಿನ ಸಮಸ್ಯೆಯೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.

ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾಲಕರಿಗೆ ಮತ್ತೆ ಒಂಟಿತನ: ನಾಗರಾಜ್ ಮರಡಿ ಮತ್ತು ತುಳಜಮ್ಮ ದಂಪತಿಗೆ ವಿವಾಹವಾಗಿ 17 ವರ್ಷವಾದರೂ ಮಕ್ಕಳಾಗಿರಲಿಲ್ಲ. ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ, ಹತ್ತಾರು ದೇವರಗಳಿಗೆ ಹರಕೆ ಹೊತ್ತ ತರುವಾಯ ಸುಚಿತ್ರಾ ಜನಿಸಿದ್ದಳು. ಆದರೆ ಸುಚಿತ್ರಾ ಆತ್ಮಹತ್ಯೆಯಿಂದ ಪಾಲಕರಲ್ಲಿ ಮತ್ತೆ ಒಂಟಿತನ ಕಾಡುವಂತಾಗಿದೆ.