ಜಿಲ್ಲೆ

ಬೈಕ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದವ ಬಂಧನ

Shivamogga

ಶಿವಮೊಗ್ಗ: ಎನ್.ಟಿ.ರಸ್ತೆಯ ಯಲ್ಲಮ್ಮ ದೇವಿ ಪಾಂಡುರಂಗ ರುಕ್ಮಾಯೀ ದೇವಸ್ಥಾನದ ಮುಂಭಾಗದಲ್ಲಿ ಬೈಕ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಪೊಲೀಸರು ಬಂಧಿಸಿದ್ದು 280 ಗ್ರಾಂ ಒಣ ಗಾಂಜಾ ಜಪ್ತಿ ಮಾಡಿದ್ದಾರೆ.

ನಗರದ ಶಾಹೀದ್ ಬಾಷಾ ಬಂಧಿತ ಆರೋಪಿ. ಶನಿವಾರ ಈತ ಬೈಕ್‌ನಲ್ಲಿ ಗಾಂಜಾ ಇಟ್ಟುಕೊಂಡು ತೆರಳುತ್ತಿದ್ದ ವೇಳೆ ಅಬಕಾರಿ ಉಪ ಆಯುಕ್ತ ಕ್ಯಾಪ್ಟನ್ ಅಜಿತ್‌ಕುಮಾರ್ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕ ಹಾಲಾನಾಯ್ಕ, ಸಿಬ್ಬಂದಿಗಳಾದ ಜಯರಂಜನ್, ಕರವೀರಪ್ಪ, ಮಧುಸೂದನ್, ವಾಹನ ಚಾಲಕ ಅರ್ಜುನ್ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದು ಎನ್‌ಡಿಪಿಎಸ್‌ನಡಿ ಪ್ರಕರಣ ದಾಖಲಿಸಿದ್ದಾರೆ.