ಜಿಲ್ಲೆ

ಕಾರ್ಮಿಕರಿಗೆ 22.55 ಕೋಟಿ ರೂ. ನೆರವು: ಬ್ಯಾಟರಂಗೇಗೌಡ

Shivamogga

ಶಿವಮೊಗ್ಗ: ಕರೊನಾ, ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಜಿಲ್ಲೆಯ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸರ್ಕಾರ 21.61 ಕೋಟಿ ರೂ. ಮತ್ತು ಅಸಂಘಟಿತ ಕಾರ್ಮಿಕರಿಗೆ 94.18 ಲಕ್ಷ ರೂ. ಜಮೆ ಮಾಡಿದೆ ಎಂದು ಪ್ರಕೋಷ್ಠದ ರಾಜ್ಯ ಸಂಚಾಲಕ ಬ್ಯಾಟರಂಗೇಗೌಡ ತಿಳಿಸಿದರು.

1,07,286 ಕಟ್ಟಡ ಕಾರ್ಮಿಕರು ಹೆಸರು ನೋಂದಾಯಿಸಿಕೊಂಡಿದ್ದು ಅದರಲ್ಲಿ ಪ್ರಸ್ತುತ 77,065 ಕಾರ್ಮಿಕರ ಖಾತೆಗೆ ತಲಾ 3 ಸಾವಿರ ರೂ. ಸಹಾಯಧನ ಜಮೆ ಆಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

1,507 ಟೈಲರ್‌ಗಳಿಗೆ 30.14 ಲಕ್ಷ ರೂ., 1,315 ಕ್ಷೌರಿಕರಿಗೆ 26.30 ಲಕ್ಷ ರೂ., 716 ಅಗಸರಿಗೆ 14.32 ಲಕ್ಷ ರೂ., 416 ಹಮಾಲರಿಗೆ 8.30 ಲಕ್ಷ ರೂ., 223 ಮನೆ ಕೆಲಸದವರಿಗೆ 4.26 ಲಕ್ಷ ರೂ., 184 ಅಕ್ಕಸಾಲಿಗರಿಗೆ 3.68 ಲಕ್ಷ ರೂ., 159 ಚಿಂದಿ ಆಯುವವರಿಗೆ 2.78 ಲಕ್ಷ ರೂ., 181 ಮೆಕಾನಿಕ್‌ಗಳಿಗೆ 3.67 ಲಕ್ಷ ರೂ., 22 ಕುಂಬಾರರಿಗೆ 44 ಸಾವಿರ ರೂ. ಸೇರಿ 11 ಸಾವಿರಕ್ಕೂ ಅಧಿಕ ಅಸಂಘಟಿತ ಕಾರ್ಮಿಕರಿಗೆ 94.18 ಲಕ್ಷ ರೂ. ಡಿಡಿಪಿ ಮೂಲಕ ನೆರವು ನೀಡಲಾಗಿದೆ ಎಂದರು. ಅಸಂಘಟಿತ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಬಿಜೆಪಿ 31 ಜಿಲ್ಲೆಯಲ್ಲೂ ಪ್ರಕೋಷ್ಠ ರಚಿಸಿದೆ. ಪ್ರಕೋಷ್ಠದ ಸಂಚಾಲಕರು ಕಾರ್ಮಿಕರ ಸಮಸ್ಯೆ ಆಲಿಸಿ ಅಧಿಕಾರಿಗಳ ಸಮನ್ವಯತೆಯೊಂದಿಗೆ ಸಹಾಯಧನ ತಲುಪಿಸಲಾಗುತ್ತಿದೆ ಎಂದು ವಿವರಿಸಿದರು.

ಜಿಲ್ಲಾ ಸಂಚಾಲಕ ಟಿ.ಪೆರುಮಾಳ್, ಪ್ರಮುಖರಾದ ಆರ್.ವಾಸುದೇವ್, ಗೋಪಾಲ್, ಎಂ.ಸಾರಂಗ್, ಮಾಧ್ಯಮ ಪ್ರಮುಖ ಕೆ.ವಿ.ಅಣ್ಣಪ್ಪ ಇದ್ದರು.