ಪಡುಬಿದ್ರಿ: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮಾರಿಯಮ್ಮನ ಸನ್ನಿಧಾನಕ್ಕೆ ಮಲ್ಪೆ ಆಳ ಸಮುದ್ರ ಮೀನುಗಾರ ಸಂಘದವರು ಬುಧವಾರ ಭೇಟಿ ನೀಡಿ ಶಿಲಾಸೇವೆ ನೀಡಿದರು.
ಮೊಗವೀರ ಸಮುದಾಯದಿಂದ ನೀಡಲ್ಪಡುವ ಮಾರಿಯಮ್ಮನ ಗರ್ಭಗುಡಿಯಲ್ಲಿರುವ ಬೃಹತ್ ಶಿಲಾಸ್ತಂಭದ ಪರವಾಗಿ 99 ಶಿಲಾಸೇವೆ, ಮಲ್ಪೆ ಮೀನುಗಾರರ ಸಂಘದಿಂದ 25 ಶಿಲಾಸೇವೆ ಹಾಗೂ ಮಲ್ಪೆ ಸಣ್ಣ ಟ್ರಾಲ್‌ಬೋಟ್, ಮೀನುಗಾರರ ಸಂಘದವರು 9 ಶಿಲಾಸೇವೆ ನೀಡುವ ಮೂಲಕ ಕಾಪುವಿನ ಅಮ್ಮನ ಮಕ್ಕಳು ತಂಡಕ್ಕೆ ಸೇರ್ಪಡೆಯಾದರು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಯೋಗೀಶ್ ವಿ.ಶೆಟ್ಟಿ ಉಪಸ್ಥಿತಿಯಲ್ಲಿ, ದೇವಳದ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯಾ ಅವರು ದೇವಿಯಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದ ನೀಡಿ ಗೌರವಿಸಿದರು.
ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಾಧವ ಆರ್.ಪಾಲನ್, ನವದುರ್ಗಾ ಲೇಖನ ಯಜ್ಞ ಸಮಿತಿ ಉಪಾಧ್ಯಕ್ಷ ಹರಿಯಪ್ಪ ಕೋಟ್ಯಾನ್, ನವದುರ್ಗಾ ಲೇಖನ ಯಜ್ಞ ಸಮಿತಿ ಕೋಶಾಧಿಕಾರಿ ಕೆ.ವಿಶ್ವನಾಥ್, ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ ಮಾಜಿ ಆಡಳಿತ ಮೊಕ್ತೇಸರ ಮೋಹನ್ ಬಂಗೇರ ಮತ್ತು ಶ್ರೀಧರ್ ಕಾಂಚನ್ ಉಪಸ್ಥಿತರಿದ್ದರು.