ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ನಾಲ್ಕು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮೂರು ಅಂತಸ್ತಿನ ನೂತನ ಪೊಲೀಸ್ ವಸತಿಗೃಹಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕರು, ಮೂರು ಅಂತಸ್ತಿನಲ್ಲಿ ಒಟ್ಟು 12 ವಸತಿಗೃಹಗಳು ನಿರ್ಮಾಣವಾಗಲಿದ್ದು, ಪೊಲೀಸ್ ಕುಟುಂಬಕ್ಕೆ ಸಹಕಾರಿಯಾಗಲಿದೆ. ಮುಂದೆ ಹಂತ ಹಂತವಾಗಿ ಪೊಲೀಸರ ಬೇಡಿಕೆಯಂತೆ ವಸತಿಗೃಹಗಳಿಗೆ ಆದ್ಯತೆ ನೀಡಲಾಗುವುದು. ಪೊಲೀಸ್ ಸಿಬ್ಬಂದಿ ಕೊರತೆ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿರುವುದಾಗಿ ತಿಳಿಸಿದರು.
ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ., ಪುರಸಭಾ ಮುಖ್ಯಾಧಿಕಾರಿ ಇಂದು ಎಂ., ಪುರಸಭಾಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಸದಸ್ಯರಾದ ಕೊರಗಪ್ಪ, ಸುರೇಶ್ ಪ್ರಭು, ಕರೀಮ್, ಮುಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಎಸ್‌ಐ ಕೃಷ್ಣಪ್ಪ, ಸಿದ್ದಪ್ಪ, ಎಎಸ್‌ಐ ರಾಜೇಶ್ ಮತ್ತು ಸಿಬ್ಬಂದಿ ವರ್ಗ, ಪ್ರಮುಖರಾದ ರಾಜೇಶ್ ಕಡಲಕೆರೆ, ಕ್ಲಾರಿಯೋ, ಲಕ್ಷ್ಮಣ ಪ್ಡೂರಿ ಮತ್ತಿತರರಿದ್ದರು.