ಜಿಲ್ಲೆ

ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ ಪ್ರಕರಣ: ಜಾಮೀನಿನ ಮೇಲೆ ಮೂವರ ಬಿಡುಗಡೆ

ಶಿವಮೊಗ್ಗ: ಶಿಕಾರಿಪುರದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಾಟ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಮೂವರು ಬುಧವಾರ ಜಾಮೀನಿನ ಮೇಲೆ ಬಿಡುಗಡೆಗೊಂಡರು.

ಶಿಕಾರಿಪುರ ತಾಲೂಕು ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಜೋಗಿಹಳ್ಳಿಯ ಪುನೀತ್ ನಾಯ್ಕ ಮತ್ತು ಚಿಂಚನಕೊಪ್ಪದ ಪ್ರೇಮ್‌ಕುಮಾರ್ ನಾಯ್ಕ ಅವರನ್ನು ಪೊಲೀಸರು ಬಂಧಿಸಿದ್ದರು. ಈ ಮೂರು ಮಂದಿಗೆ ಮಂಗಳವಾರವೇ ಶಿಕಾರಿಪುರ ನ್ಯಾಯಾಲಯದ ಜಾಮೀನು ಮಂಜೂರು ಮಾಡಿತ್ತು.

ರಾತ್ರಿ ಆಗಿದ್ದರಿಂದ ಕೇಂದ್ರ ಕಾರಾಗೃಹದಲ್ಲಿದ್ದ ಬಂಧಿತರಿಗೆ ಬಿಡುಗಡೆ ಭಾಗ್ಯ ಸಿಕ್ಕಿರಲಿಲ್ಲ. ಬುಧವಾರ ಬೆಳಗ್ಗೆ ಕಾರಾಗೃಹದಿಂದ ಹೊರಬಂದ ಮೂವರನ್ನೂ ಬಂಜಾರ ಸಮುದಾಯದ ಯುವಕರು ಭರ್ಜರಿ ಸ್ವಾಗತ ಮಾಡಿ ಕರೆದೊಯ್ದರು.