ಜಿಲ್ಲೆ

ಶಿಥಿಲಾವಸ್ಥೆಯ ಸರ್ಕಾರಿ ಉರ್ದು ಶಾಲೆ ಸ್ಥಳಾಂತರ

Davangere - Desk - Ganesh M K

ಜಗಳೂರು: ಪಟ್ಟಣದ ಶತಮಾನದ ಹೊಸ್ತಿಲಲ್ಲಿರುವ ಸರ್ಕಾರಿ ಉರ್ದು ಶಾಲೆ ಕಟ್ಟಡ ಶಿಥಿಲಾವಸ್ಥೆಯಲ್ಲಿರುವ ಕಾರಣ ಶಾಲೆಯನ್ನು ಸೋಮವಾರದಿಂದ ಸರ್ಕಾರಿ ಮೌಲಾನಾ ಅಜಾದ್ ಶಾಲೆಯ ಕಟ್ಟಡಕ್ಕೆ ಸ್ಥಳಾಂತರ ಮಾಡಲು ಇಲಾಖೆಯಿಂದ ಸೂಚನೆ ಬಂದಿದೆೆ ಎಂದು ಪ್ರಭಾರ ಬಿಇಒ ಸುರೇಶ್ ರೆಡ್ಡಿ ಮಾಹಿತಿ ನೀಡಿದರು.

ಶುಕ್ರವಾರ ಉರ್ದು ಶಾಲೆಗೆ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ಬಿಇಒ ಸುರೇಶ್‌ರೆಡ್ಡಿ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಡಿ.ಡಿ. ಹಾಲಪ್ಪ, ಶಾಸಕರ ಪುತ್ರ ಎಂ.ಡಿ. ಕೀರ್ತಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಉರ್ದು ಶಾಲೆ ಸಂಪೂರ್ಣ ಸೋರುತ್ತಿದೆ. ಸರ್ಕಾರಿ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ಶಿಥಿಲಾವಸ್ಥೆಯ ಶತಮಾನದ ಶಾಲೆಗಳಿಗಿಲ್ಲ ಕಾಯಕಲ್ಪ’ ಎಂಬ ತಲೆಬರಹದಡಿ ವಿಜಯವಾಣಿ ಪತ್ರಿಕೆ ಸುದ್ದಿ ಪ್ರಕಟಿಸಿತ್ತು.

ಹೆಚ್ಚೆತ್ತ ಅಧಿಕಾರಿ ವರ್ಗ, ಮಕ್ಕಳ ಹಿತದೃಷ್ಟಿಯಿಂದ ಹೊಸ ಕಟ್ಟಡ ನಿರ್ಮಾಣವಾಗುವವರೆಗೂ ಸ್ಥಳ ಬದಲಾವಣೆ ಮಾಡುವಂತೆ ಶಾಲೆಯ ಶಿಕ್ಷಕರಿಗೆ ಸೂಚನೆ ನೀಡಿದೆ.