ಕಾರವಾರ: ಸತತ ಐದು ದಿನಗಳ ಕಾರ್ಯಾಚರಣೆಯ ಬಳಿಕವೂ ವಾಣಿಜ್ಯ ಹಡಗಿಗೆ ಕಾರವಾರ ತೀರದ ಅಮೀಪ ಬಿದ್ದಿರುವ ಬೆಂಕಿ ಆರಿಲ್ಲ.
1,115 ಬಾಕ್ಸ್ ಮತ್ತು ಸೋಡಿಯಂ ಸೈನೈಟ್ ರಾಸಾಯನಿಕ ಹೊತ್ತು ಗುಜರಾತ್ ಮುಂದ್ರಾ ಬಂದರಿನಿಂದ ಶ್ರೀಲಂಕಾ ಕೊಲಂಬೋ ಬಂದರಿಗೆ ಹೊರಟಿದ್ದ ಮಾರ್ಕ್ಸ್ ಫ್ರಾಂಕ್ ಫರ್ಟ್ ಹೆಸರಿನ ಪಾನಾಮಾ ಧ್ವಜದ ಹಡಗಿನಲ್ಲಿ ಶುಕ್ರವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿತ್ತು. ಆಗ ಹಡಗು ಕಾರವಾರದಿಂದ ಸುಮಾರು 50 ನಾಟಿಕಲ್ ಮೈಲ್ ದೂರದಲ್ಲಿತ್ತು.
ನಂತರ ಮುಂಬೈನಿಂದ ಆಗಮಿಸಿದ ಸಮುದ್ರ ಪ್ರಹರಿ ಸಚೇತ್ ಹಡಗುಗಳು, ಡ್ರೋನಿಯರ್ ವಿಮಾನ, ಹೆಲಿಕಾಪ್ಟರ್ ಸಹಾಯದಿಂದ ಬೆಂಕಿ ನಂದಿಸುವ ಕಾರ್ಯವನ್ನು ಕೋಸ್ಟ್ ಗಾರ್ಡ್ ನಡೆಸಿದೆ. ಸದ್ಯ ಹಡಗು ಕಾರವಾರ ತೀರದಿಂದ ದಕ್ಷಿಣಕ್ಕೆ 6.5 ನಾಟಿಕಲ್ ಮೈಲ್ ದೂರದಲ್ಲಿದೆ ಎಂದು ಕೋಸ್ಟ್ ಗಾರ್ಡ್ ಮಾಹಿತಿ ನೀಡಿದೆ.
ಬೆಂಕಿ ನಿಯಂತ್ರಣಕ್ಕೆ ಬಂದಿದೆ ಎಂದು ಕೋಸ್ಟ್ ಗಾರ್ಡ್ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದೆ. ಇಷ್ಟೇ ಅಲ್ಲದೇ ವಿಶೇಷ