ಗೋಕಾಕ: ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಶನಿವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಜೋಕಾನಟ್ಟಿ ಗ್ರಾಮದ ಶಿದ್ಲಿಂಗಪ್ಪ ಕಂಬಳಿ ಮತ್ತು ಉಪಾಧ್ಯಕ್ಷರಾಗಿ ರಂಗಾಪುರ ಗ್ರಾಮದ ಮಲ್ಲಿಕಾರ್ಜುನ ಕಬ್ಬೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ & ಉಪಾಧ್ಯಕ್ಷರ ಅಧಿಕಾರವಧಿ 2028ರ ವರೆಗೆ ಇರಲಿದೆ ಎಂದು ಚುನಾವಣಾಧಿಕಾರಿ ಎಸ್.ಬಿ.ಬಿರಾದಾರ ಪಾಟೀಲ ಪ್ರಕಟಿಸಿದರು.
ಅಧ್ಯ ಶಿದ್ಲಿಂಗಪ್ಪ ಕಂಬಳಿ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತವರ ಸಹೋದರರ ಮಾರ್ಗದರ್ಶನದಲ್ಲಿ ಕಾರ್ಖಾನೆ ಅಭಿವದ್ಧಿ ಮಾಡಲಾಗುವುದು. ರೈತರು ಸಹಕಾರ ನೀಡಬೇಕು ಎಂದರು.
ಆಡಳಿತ ಮಂಡಳಿಯಿಂದ ಸನ್ಮಾನ ಸ್ವೀಕರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ರೈತರು ಉತ್ತಮ ಕಬ್ಬು ಕಾರ್ಖಾನೆಗೆ ಪೂರೈಸಿ ಪ್ರಗತಿಗೆ ಕೈಜೋಡಿಸಬೇಕು. ಕಬ್ಬು ನುರಿಸುವ ಹಂಗಾಮು ನವೆಂಬರ್ನಲ್ಲಿ ಆರಂಭಿಸಲಾಗುವುದು. 3 ರಿಂದ 5 ಲ ಮೆ. ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ. ಆಯ್ಕೆಯಾದವರು ರೈತರ ಹಿತಕ್ಕನುಗುಣವಾಗಿ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು. ಮಾಜಿ ಅಧ್ಯಕ್ಷ ಅಶೋಕ ಪಾಟೀಲ ಮತ್ತು ಉಪಾಧ್ಯಕ್ಷ ರಾಮಣ್ಣ ಮಹಾರೆಡ್ಡಿ ನಿಧನದಿಂದ ತೆರವಾಗಿದ್ದ ಸ್ಥಾನಗಳಿಗೆ ಅವರ ಮಕ್ಕಳನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು.
ನಿರ್ದೇಶಕರಾದ ಗಿರೀಶ ಹಳ್ಳೂರ, ಭೂತಪ್ಪ ಗೊಡೇರ, ಮಹಾದೇವಪ್ಪ ಭೋವಿ, ಮಾಳಪ್ಪ ಜಾಗನೂರ, ಲಕ್ಷ$್ಮಣ ಗಣಪ್ಪಗೋಳ, ಶಿವಲಿಂಗಪ್ಪ ಪೂಜೇರಿ, ಜಗದೀಶ ಬಂಡ್ರೋಳಿ, ವಿನೀತ ಪಾಟೀಲ, ಅರುಣ ಮಹಾರೆಡ್ಡಿ, ಶಿವನಗೌಡ ಪಾಟೀಲ, ಆರ್ೀ ಪೀರಜಾದೆ, ಯಲ್ಲವ್ವ ಸಾರಾಪುರ, ಲಕ್ಕವ್ವ ಬೆಳಗಲಿ, ಲೆಕ್ಕ ಪರಿಶೋಧಕ ಸೆದಪ್ಪ ಗದಾಡಿ, ಕಚೇರಿ ಅಧೀಕ ಈರಣ್ಣ ಜಂಬಗಿ ಇದ್ದರು.