ಮಂಗಳೂರು : ಶಿಬರೂರು ಶ್ರೀ ಕೊಡಮಾಣಿತ್ತಾಯ ಕ್ಷೇತ್ರದಲ್ಲಿ ಏ.22ರಿಂದ ಆರಂಭಗೊಳ್ಳುವ ಬ್ರಹ್ಮಕಲಶೋತ್ಸವ ಮತ್ತು ನಾಗಮಂಡಲದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತವನ್ನು ಬುಧವಾರ ವೇದಮೂರ್ತಿ ವೇದವ್ಯಾಸ ತಂತ್ರಿಗಳ ಪೌರೋಹಿತ್ಯದಲ್ಲಿ ಧಾರ್ಮಿಕ ಮುಂದಾಳು ಶೆಡ್ಡೆ ಮಂಜುನಾಥ ಭಂಡಾರಿ ನೆರವೇರಿಸಿದರು.
ಶಿಬರೂರುಗುತ್ತು ಗುತ್ತಿನಾರ್ ಉಮೇಶ್.ಎನ್.ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಪ್ರಭಾಕರ.ಎಸ್.ಶೆಟ್ಟಿ , ಕುಡುಂಬೂರುಗುತ್ತು ಜಯರಾಮ ಶೆಟ್ಟಿ, ಕಾರ್ಯಾಧ್ಯಕ್ಷ ಪ್ರದ್ಯುಮ್ನ ರಾವ್, ಪ್ರಧಾನ ಕಾರ್ಯದರ್ಶಿ ಎಂ.ಮಧುಕರ ಅಮೀನ್, ಪ್ರಧಾನ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ತುಕಾರಾಮ ಶೆಟ್ಟಿ ಪರ್ಲಬೈಲ್ ಗುತ್ತು, ಶಿವಾನಂದ ಶೆಟ್ಟಿ , ಸೂರಿಂಜೆ ಗ್ರಾಪಂ ಅಧ್ಯಕ್ಷೆ ಗೀತಾ ಶೆಟ್ಟಿ, ಪುರಂದರ ಎಂ ಶೆಟ್ಟಿ , ಕಾಂತಪ್ಪ ಸಾಲಿಯಾನ್, ದಿವಾಕರ ಸಾಮಾನಿ, ಸ್ವಾಗತ ಸಮಿತಿಯ ಜಿತೇಂದ್ರ ಶೆಟ್ಟಿ ್ತ, ಸ್ವಯಂಸೇವಕ ಸಮಿತಿಯ ಗಿರೀಶ್ ಶೆಟ್ಟಿ ಪಡುಮನೆ, ವಿನೀತ್ ಶೆಟ್ಟಿ , ಸುರೇಂದ್ರ ಶೆಟ್ಟಿ ದೇಂದೊಟ್ಟು, ಮಾಧ್ಯಮ ಸಮಿತಿಯ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ಮಾತೃ ಸಮಿತಿಯ ಪ್ರಧಾನ ಕಾರ್ಯದರ್ಶಿ ಆಶಾ ಶೆಟ್ಟಿ ಪಡುಮನೆ, ವಿವಿಧ ಸಮಿತಿಗಳ ಪ್ರಮುಖರಾದ ವಿಜೇಶ್ ಶೆಟ್ಟಿ, ಜಗದೀಶ್ ಶೆಟ್ಟಿ, ದಯಾನಂದ ದೇವಾಡಿಗ, ಬಾಲಕೃಷ್ಣ ಕುಲಾಲ್, ಸುಜಾತ ಶೆಟ್ಟಿ, ಸುಧಾಕರ ಶೆಟ್ಟಿ, ದಿನಕರ ಕೈಯೂರು, ಭುವನೇಶ್ ಆಚಾರ್ಯ, ಸಂದೀಪ್ ಶೆಟ್ಟಿ, ಶ್ಯಾಮಲ ಪ್ರಭಾಕರ ಶೆಟ್ಟಿ , ಸುಷ್ಮಾ ಯು ಶೆಟ್ಟಿ , ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು