ಜಿಲ್ಲೆ

ಶಿಬರೂರು ಕ್ಷೇತ್ರ ಮಹೋತ್ಸವಕ್ಕೆ ಚಾಲನೆ

Dakshina Kannada

ಸುರತ್ಕಲ್: ಇತಿಹಾಸ ಪ್ರಸಿದ್ಧ ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ವರ್ಷಾವಧಿ ಉತ್ಸವ ತಿಬರಾಯನಕ್ಕೆ ಮಂಗಳವಾರ ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಗಿದ್ದು, ಬುಧವಾರ ತುಲಾಭಾರ ಸೇವೆ, ಶ್ರೀ ಉಳ್ಳಾಯ ದೈವದ ನೇಮ, ಉರುಳು ಸೇವೆ, ಕಂಚೀಲು ಸೇವೆ ಇತ್ಯಾದಿ ನಡೆಯಿತು. ಮಹಾಅನ್ನಸಂತರ್ಪಣೆ ನಡೆಯಿತು.

ಕೋವಿಡ್ 19 ಅನ್ವಯ ಸರ್ಕಾರದ ನಿಯಮಾವಳಿ ಪ್ರಕಾರ ಉತ್ಸವ ನಡೆಯುತ್ತಿದ್ದು, ವರ್ಷಾವಧಿ ಮಹೋತ್ಸವ ಕಾರ್ಯಕ್ರಮಗಳು ಡಿ.22ರವರೆಗೆ ನಡೆಯುತ್ತಿವೆ.