ಜಿಲ್ಲೆ

ಶೆಟ್ಟರ್ ಸ್ಥಿತಿ ನಾ ಘರ್‌ಕಾ-ನಾ ಘಾಟ್‌ಕಾ

ಹುಬ್ಬಳ್ಳಿ: ಜಗದೀಶ ಶೆಟ್ಟರ್‌ಗೆ ಕಾಂಗ್ರೆಸ್‌ನಲ್ಲಿ ಬೆಲೆ ಇಲ್ಲ. ಕಾಂಗ್ರೆಸ್‌ನ ಕೆಲ ನಾಯಕರು ಅವರಿಗೆ ಬೆಲೆ ಇಲ್ಲದಿರುವ ಬಗ್ಗೆ ಹೇಳಿದ್ದಾರೆ. ಅವರಿಗೆ ನಾ ಘರ್‌ಕಾ, ನಾ ಘಾಟ್‌ಕಾ ಎನ್ನುವ ಪರಿಸ್ಥಿತಿ ಬಂದಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಕಾಲೆಳೆದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೆಟ್ಟರ್ ಹತಾಶರಾಗಿದ್ದಾರೆ. ಅವರನ್ನು ಬಿಜೆಪಿಗೆ ಕರೆ ತರುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಅವರು ಕಾಂಗ್ರೆಸ್‌ಗೆ ಹೋಗಿದ್ದಾರೆ. ಅಲ್ಲಿಯೇ ಆರಾಮದಿಂದ ಇರಲಿ ಎಂದರು.
ಮೂವತ್ತು ವರ್ಷಗಳ ಹಿಂದೆ ಶ್ರೀರಾಮಚಂದ್ರಕೀ ಜೈ ಎಂದು ಜಗದೀಶ ಶೆಟ್ಟರ್ ಹೇಳುತ್ತಿದ್ದರು. ಪಕ್ಷ ಬದಲಾಯಿಸಿದ ನಂತರ ಭಾವನೆ ಬದಲಾಗಬಾರದು. ಬಿಜೆಪಿ ರಾಜಕೀಯ ದಾಳಿ ಮಾಡುತ್ತಿಲ್ಲ. ಆದರೆ ಶೆಟ್ಟರ್ ಈ ರೀತಿ ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆ. ಇಡೀ ದೇಶದ ಜನರು ರಾಮ ಮಂದಿರದ ಬಗ್ಗೆ ಉತ್ತಮ ಭಾವನೆ ವ್ಯಕ್ತಪಡಿಸುತ್ತಿದ್ದಾರೆ ಎಂದರು.