ಜಿಲ್ಲೆ

ಸೈನಿಕರಿಂದಲೇ ದೇಶ ಸುರಕ್ಷಿತ, ಸಂಕಲ್ಪ ಶೆಟ್ಟರ ಅಭಿಮತ

Dharwada - Basavaraj Idli

ಹುಬ್ಬಳ್ಳಿ: ಕಾಗಿರ್ಲ್ ವಿಜಯ ದಿವಸದ ಪ್ರಯುಕ್ತ ನಗರದ ಎಸ್.ಎಸ್. ಶೆಟ್ಟರ್ ಫೌಂಡೇಷನ್ ವತಿಯಿಂದ ಸೈನಿಕರಿಗೆ ಗೌರವಾರ್ಪಣೆಯ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು.

ಕುಂದಗೋಳ ತಾಲೂಕಿನ ಬೆಟದೂರಿನಲ್ಲಿ ಹುತಾತ್ಮ ಯೋಧ ಲಾನ್ಸ್ ನಾಯಕ ಹನುಮಂತಪ್ಪ ಕೊಪ್ಪದ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಸೈನಿಕರಿಗೆ ಮತ್ತು ಸೈನಿಕರ ಕುಟುಂಬದವರಿಗೆ ಸನ್ಮಾನಿಸಲಾಯಿತು.

ಫೌಂಡೇಷನ್ ಅಧ್ಯಕ್ಷ ಸಂಕಲ್ಪ ಶೆಟ್ಟರ್ ಅವರು ಹುತಾತ್ಮಯೋಧ ಹನುಮಂತಪ್ಪ ಕೊಪ್ಪದ ಅವರ ಮನೆಗೆ ಭೇಟಿ ನೀಡಿ ಅವರ ತಾಯಿಯವರ ಆರೋಗ್ಯ ವಿಚಾರಿಸಿ ಗೌರವ ಸಲ್ಲಿಸಿದರು.

ಪಾಕಿಸ್ತಾನದ ವಿರುದ್ಧ ಜೀವದ ಹಂಗು ತೊರೆದು ಹೋರಾಡಿ ಭವ್ಯ ಭಾರತದ ಧ್ವಜವನ್ನು ಉತ್ತುಂಗಕ್ಕೆ ಹಾರಿಸಿದ ಹೆಮ್ಮೆಯ ದಿನ ಕಾರ್ಗಿಲ್  ವಿಜಯ ದಿವಸ. ಕೆಚ್ಚೆದೆಯಿಂದ ಹೋರಾಡಿದ ಸೈನಿಕರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ. ಸೈನಿಕರು ಇಲ್ಲದಿದ್ದರೆ ನಾವ್ಯಾರೂ ಸುರಕ್ಷಿತವಾಗಿ ಇರಲು ಸಾಧ್ಯವಿಲ್ಲ ಎಂದು ಸಂಕಲ್ಪ ಹೇಳಿದರು.

ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲ್ಬುರ್ಗಿ, ಭೀಮಪ್ಪ ದೊಡಶಂಕರ, ತಮ್ಮನಗೌಡ ಪಾಟೀಲ, ಈರಣ್ಣ ಮತ್ತಿಕಟ್ಟಿ, ತೋಟಪ್ಪ ಪಾಟೀಲ, ಚನ್ನಪ್ಪ ಕೊಪ್ಪದ, ಚಂದ್ರು ಶೆರೆವಾಡ, ಶಿವಾನಂದ ಕೊಪ್ಪದ, ಶಿವಪ್ಪ ಕೊಪ್ಪದ, ಸಿದ್ದಲಿಂಗೇಶ ಕರೆಣ್ಣವರ, ಮಹಾವೀರ ಹೊಂಡದ, ಫೌಂಡೇಷನ್ ಸದಸ್ಯರು ಹಾಗೂ ಬೆಟದೂರು ಗ್ರಾಮಸ್ಥರು ಉಪಸ್ಥಿತರಿದ್ದರು.