ಮಂಗಳೂರು: ಅತ್ತಾವರದ ಶೆಫರ್ಡ್ಸ್ ಇಂಟರ್‌ನ್ಯಾಷನಲ್ ಅಕಾಡೆಮಿಯಲ್ಲಿ ಇತ್ತೀಚೆಗೆ ಮಾಂಟೆಸ್ಸರಿ ಪದವಿ ಪ್ರದಾನ ಮಾಡಲಾಯಿತು.
ಸಂಸ್ಥೆಯ ಅಧ್ಯಕ್ಷ ಆರ್. ಮೊಹಮ್ಮದ್ ನಿಸಾರ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಅವಶ್ಯ. ವಿಶೇಷವಾಗಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ಭವಿಷ್ಯಕ್ಕೆ ಪೂರಕ ಎಂದರು.
ಡಾ.ಹಶೀರ್ ಸಫ್ವಾನ್ ಯು. ಮುಖ್ಯ ಅತಿಥಿಯಾಗಿದ್ದರು. ಶಿಕ್ಷಣ ಕೇವಲ ಉದ್ಯೋಗಕ್ಕಾಗಿ ಪಡೆಯಬಾರದು. ನೈಜ ಜೀವನ ಶಿಕ್ಷಣ ಪಡೆಯುವುದು ಅಗತ್ಯ ಎಂದರು.
ಕಾರ್ಯದರ್ಶಿ ರಿಜ್ವಾನ್ ಪಾಂಡೇಶ್ವರ, ಟ್ರಸ್ಟಿ ನೌಶದ್ ಎ.ಕೆ. ಮತ್ತು ಪ್ರಾಂಶುಪಾಲೆ ಲುಬ್ನಾ ಬಾನು ಪದವೀಧರರನ್ನು ಗೌರವಿಸಿದರು.
ಮರಿಯಮ್ ಹಫಾಫ್ ಸ್ವಾಗತಿಸಿದರು. ಮಾಂಟೆಸ್ಸರಿ ಮಾಸ್ಟರ್ಸ್‌ಗಳಾದ ಬೇರೇರಾ ಇರ್ಷನ್ ಮತ್ತು ಮರಿಯಮ್ ಶಾಜ್ಮಾ ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ವೇದಿಕೆಗೆ ಆಗಮಿಸಿ ಪದವಿ ಪಡೆಯಲು ಸಹಕಾರ ನೀಡಿದರು.
ವಿದ್ಯಾರ್ಥಿಗಳು ಹಾಗೂ ಪೋಷಕರು ಅನುಭವ ಹಂಚಿಕೊಂಡರು. ಶಾ ಜೈನಾಬ್ ವಂದಿಸಿದರು.