ಜಿಲ್ಲೆ

Jatra ಮಾರ್ಚ್‌ 1 ರಂದು ಕಾರವಾರ ಶೆಜ್ಜೇಶ್ವರ ಜಾತ್ರೆ

Uttara Kannada - Subash Hegde

ಕಾರವಾರ: ತಾಲೂಕಿನ ಶೇಜವಾಡದ ಶೆಜ್ಜೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವವು ಫೆ.26 ರಿಂದ ಮಾ1 ರ ವರೆಗೆ ನಡೆಯಲಿದೆ.

ಮಹಾ ಶಿವರಾತ್ರಿ ನಿಮಿತ್ತ ಫೆ. 26 ರ ಬೆಳಗ್ಗೆಯಿಂದ ಸಂಜೆ 6 ಗಂಟೆಯವರೆಗೆ ದೇವರಿಗೆ ಪಂಚಾಮೃತ ಅಭಿಷೇಕ, ರಾತ್ರಿ 7 ಗಂಟೆಯಿAದ ಶತರುದ್ರಾಭಿಷೇಕ ನಡೆಯಲಿದೆ. ಬಳಿಕ ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದ್ದುದೆ. ರಾತ್ರಿ ಪೂರ್ತಿ ದೇವಸ್ಥಾನ ತೆರೆದಿಟ್ಟು ಜಾಗರಣೆ ಮಾಡಲಾಗುವುದು.

ಫೆ.27 ರಂದು ಬೆಳಗ್ಗೆ 7 ಗಂಟೆಗೆ ಸಮುದ್ರ ಸ್ನಾನಕ್ಕೆ ಪಲ್ಲಕ್ಕಿಯ ಮೂಲಕ ತೆರಳಿ ಮರಳಿದ ಬಳಿಕ ದೇವಾಲಯದಲ್ಲಿ ಮಧ್ಯಾಹ್ನ ಪೂಜೆ ರಾತ್ರಿ ದೇವರ ಪಲ್ಲಕ್ಕಿ ಮೆರವಣಿಗೆ, ರಂಗ ಪೂಜೆ, ಅಷ್ಟಾವಧಾನ ಸೇವೆ, ಪ್ರಸಾದ ವಿತರಣೆ ನಡೆಯಲಿವೆ.

ಫೆ.28 ರಂದು ಮಧ್ಯಾಹ್ನ 1:30 ಕ್ಕೆ ಹೋಮ ಹವನ, ಸಾಯಂಕಾಲ 5 ಘಂಟೆಗೆ ರಥಾರೋಹಣ ದೇವರಿಗೆ ಹಣ್ಣು ಕಾಯಿ ಸೇವೆ, ದರ್ಶನ, ಕಾಣಿಕೆ ಸಲ್ಲಿಕೆ ನಡೆಯಲಿದೆ. ಸಾಯಂಕಾಲ 7:30 ರಿಂದ ಸಂಕೇತ ಸಪ್ರೆ ತಬಲಾ, ಸಿದ್ಧಾಂತ ಮಡಕೈಕರ ಹಾರ್ಮೋನಿಯಮ್ ದೃಶಾಲ ಚಾರಿ ಗೋವಾ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10 ಗಂಟೆಗೆ ದೇವಸ್ಥಾನದ ಪಂಚವಾದ್ಯದೊAದಿಗೆ ಹಿಲಾಮತಿ ಮೆರವಣಿಗೆ ನಂತರ ದೇವರ ಫಲಪುಷ್ಪ ಲೀಲಾವು ನಂತರ ನಾಟ್ಯ ರಾಣಿ ಭರತ ನಾಟ್ಯ ನೃತ್ಯ ಕಲಾ ಕೇಂದ್ರ, ಕಾರವಾರ ವಿದ್ಯಾರ್ಥಿಯವರಿಂದ ಭರತ ನಾಟ್ಯ ಪ್ರದರ್ಶನಗೊಳ್ಳಲಿದೆ. ರಾತ್ರಿ 11:30 ರಿಂದ ಶೇಜವಾಡದ ಅಭಿನದ ನಾಟ್ಯ ಸಮಾಜ ಅರ್ಪಿಸುವ ಪ್ರದೀಪ್ ಗುರುನಾಥ ಕೋಠಾರಕರ್ ವಿರಚಿತ ಸಾಮಾಜಿಕ ಕೊಂಕಣಿ ನಾಟಕ `ಶಪಥ ತುಕಾ ಹ್ಯಾ ಮಂಗಳಸೂತ್ರಾಚೆ' ಪ್ರದರ್ಶನಗೊಳ್ಳಲಿದೆ.

ಮಾ.1 ರಂದು ರಂದು ಬೆಳಗ್ಗೆ 4 ಗಂಟೆಗೆ ರಥೋತ್ಸವ ನಡೆಯಲಿದೆ. ಸಂಜೆ 4 ಗಂಟೆಗೆ ದೇವರ ಅವಭೃತ ಸ್ನಾನ (ಓಕುಳಿ), ಪಲ್ಲಕ್ಕಿ ಮೆರವಣಿಗೆ, ಪೂಜೆ, ಪ್ರಸಾದ ವಿತರಣೆ ನಡೆಯಲಿದ್ದು ರಾತ್ರಿ 9 ಗಂಟೆಗೆ ಓಎಚ್‌ಬಿ ಎವೆಂಟ್ಸ್ ಹೊನ್ನಾವರ ಇವರಿಂದ "ನೃತ್ಯ ಸಂಗಮ" ಕಾರ್ಯಕ್ರಮ ನಡೆಯಲಿದೆ.