ಹುನಗುಂದ: ತಾಲೂಕಿನ ಗಟ್ಟಿಗನೂರ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ 17 ಕುರಿಗಳನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಹುನಗುಂದ ಠಾಣೆ ಪೊಲೀಸರು ಮಂಗಳವಾರ ಧನ್ನೂರ ಕ್ರಾಸ್‌ನಲ್ಲಿ ಬಂಧಿಸಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಪರಶುರಾಮ ಲತ್ತಿಗೇರಿ (24) ಹಾಗೂ ಮಲ್ಲಿಕಾರ್ಜುನ ಬಂಡಿ (24) ಬಂಧಿತರು. ಕುರಿ ಸಾಗಣೆಗೆ ಬಳಸುತ್ತಿದ್ದ 4.5 ಲಕ್ಷ ರೂ. ಮೌಲ್ಯದ ಎರಡು ವಾಹನ ಹಾಗೂ 70 ಸಾವಿರ ನಗದನ್ನು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದೆ ಎಂದು ಪಿಎಸ್‌ಐ ಪ್ರಕಾಶ ಡಿ. ತಿಳಿಸಿದ್ದಾರೆ.