ಮಂಗಳೂರು ಕೆನರಾ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಸಮಾರಂಭದಲ್ಲಿ ಶೀನಾ ನಾಡೋಳಿ ಅವರ ಬೊಳಂತ್ಯೆ- ಉರ್ಪೆಲ್ (ತುಳು), ದರ್ಮೊದಿಟ್ಟಿ /ಧರ್ಮದೃಷ್ಟಿ ಮತ್ತು ಪ್ಲೀಸ್, ಫೀಸ್ ಪಿರಕೊರ‌್ಲೆ /ಪ್ಲೀಸ್ ನನ್ನ ಫೀಸ್ ಕೊಡಿ ಕೃತಿಗಳನ್ನು ಕರ್ನಾಟಕ ಜಾನಪದ ವಿಶ್ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಅನಾವರಣಗೊಳಿಸಿದರು. ತುಳು ಸಾಹಿತ್ಯ ಆಕಾಡೆಮಿ ಸದಸ್ಯೆ ಆಕ್ಷಯ ಆರ್. ಶೆಟ್ಟಿ, ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಸಾಹಿತಿ ರಘು ಇಡ್ಕಿದು, ಕಾಂಜವೇ ಸಾಂಸ್ಕೃತಿಕ ವೇದಿಕೆ ಬೆಳ್ತಂಗಡಿ ಸಂಚಾಲಕ ಆನಂದ ಡಿ. ಉಪಸ್ಥಿತರಿದ್ದರು. 
ಜಿಲ್ಲೆ

ಲೇಖಕರು ಸಾಂಸ್ಕೃತಿಕ ಬೇರುಗಳನ್ನು ಕಳೆದುಕೊಳ್ಳದಿರುವುದು ಮುಖ್ಯ; ಶೀನಾ ನಾಡೋಳಿ ಅವರ ಕೃತಿ ಬಿಡುಗಡೆಗೊಳಿಸಿ ಡಾ.ಚಿನ್ನಪ್ಪ ಗೌಡ

Mangaluru - Prakash MC Manjeshwar

ವಿಜಯವಾಣಿ ಸುದ್ದಿಜಾಲ ಮಂಗಳೂರು

ತನ್ನ ಸಾಂಸ್ಕೃತಿಕ ಬೇರುಗಳನ್ನು ಕಳೆದುಕೊಳ್ಳದವರು ಮಹತ್ವದ ಲೇಖಕರು ಆಗುತ್ತಾರೆ. ಲೇಖಕ ಶೀನಾ ನಾಡೋಳಿಯವರ ಸಾಂಸ್ಕೃತಿಕ ಬೇರುಗಳು ಅವರು ಹುಟ್ಟಿ ಬೆಳೆದ ತುಳು ಭಾಷೆ, ಸಂಸ್ಕೃತಿ, ಪಾಡ್ದನ ಒಳಗೊಂಡಿರುವ ತುಳು ಜಗತ್ತಿನಲ್ಲಿದೆ. ಆದ್ದರಿಂದ ಹೊಸ ಕೃತಿಗಳ ಮೂಲಕ ಅವರು ಇಂಗ್ಲಿಷ್ ನಿಂದ ಕನ್ನಡ ಮತ್ತು ತುಳುವಿಗೆ ತಂದಿರುವ ಕೃತಿಗಳು ಮಹತ್ವ ಪಡೆದಿವೆ ಎಂದು ಕರ್ನಾಟಕ ಜಾನಪದ ವಿಶ್ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಹೇಳಿದರು.

  • ನಗರದ ಕೆನರಾ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಶೀನಾ ನಾಡೋಳಿ ಅವರ ಬೊಳಂತ್ಯೆ- ಉರ್ಪೆಲ್ (ತುಳು), ದರ್ಮೊದಿಟ್ಟಿ /ಧರ್ಮದೃಷ್ಟಿ ಮತ್ತು ಪ್ಲೀಸ್, ಫೀಸ್ ಪಿರಕೊರ‌್ಲೆ /ಪ್ಲೀಸ್ ನನ್ನ ಫೀಸ್ ಕೊಡಿ ಕೃತಿಗಳು ಬಿಡುಗಡೆ ಸಮಾರಂಭದಲ್ಲಿ ಕೊನೆಯ ಎರಡು ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
  • ಒಂದು ಕಾಲದಲ್ಲಿ ಅನುವಾದ ಸಾಹಿತ್ಯ ಎನ್ನುವುದು ಎರಡನೇ ದರ್ಜೆಯ ಸಾಹಿತ್ಯ ಎನ್ನು ಅಭಿಪ್ರಾಯ ಇತ್ತು. ಆದರೆ ಒಂದು ಸಾಹಿತ್ಯದ ಗ್ರಹಿಕೆಗೆ ಸೀಮಿತವಾಗಿ ಈ ಅಭಿಪ್ರಾಯವಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ.ಅನುವಾದ ಸಾಹಿತ್ಯ ಕೂಡ ಯಾಕೆ ಮುಖ್ಯ ಅನ್ನುವುದಕ್ಕೆ ಶೀನಾ ನಾಡೋಳಿ ಅವರ ಕೃತಿಗಳು ಉತ್ತಮ ಉದಾಹರಣೆಯಾಗಿವೆ. ಅವರ ಭಾಷೆ, ಬಳಸುವ ರೂಪಕ ಅತ್ಯಂತ ಸೊಗಸಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
  • ಬೊಳಂತ್ಯೆ- ಉರ್ಪೆಲ್ (ತುಳು) ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಅವರು, ತುಳು ಭಾಷೆ, ಸಾಹಿತ್ಯ ಮತ್ತಷ್ಟು ವಿಸ್ತಾರವಾಗಿ ಬೆಳೆಯಬೇಕು. ರಾಜಾಶ್ರಯವೂ ದೊರೆಯಬೇಕು ಎಂದು ಆಶಿಸಿದರು.
  • ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಆಂಗ್ಲ ಭಾಷಾ ಪ್ರಾಧ್ಯಾಪಕ ನಂದಕಿಶೋರ್ ಎಸ್. ಹಾಗೂ ಖ್ಯಾತ ರಂಗಕರ್ಮಿ ಮೋಹನ್ ಚಂದ್ರ ಯು. ಪುಸ್ತಕದ ಪರಿಚಯ ಮಾಡಿದರು. ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಸದಸ್ಯೆ ಆಕ್ಷಯ ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
  • ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಸಾಹಿತಿ ರಘು ಇಡ್ಕಿದು, ಕಾಂಜವೇ ಸಾಂಸ್ಕೃತಿಕ ವೇದಿಕೆ ಬೆಳ್ತಂಗಡಿ ಇದರ ಸಂಚಾಲಕ ಆನಂದ ಡಿ. ಉಪಸ್ಥಿತರಿದ್ದರು. ಗಾಯಕ ಮೈಮ್ ರಾಮ್‌ದಾಸ್ ತತ್ವಪದ ಹಾಡಿದರು.
  • ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ, ಕಾಂಜವೇ ಸಾಂಸ್ಕೃತಿಕ ವೇದಿಕೆ ಬೆಳ್ತಂಗಡಿ, ವಿದ್ಯಾ ಪ್ರಕಾಶನ ಅತ್ತಾವರ ಕುಡ್ಲ, ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಕುಡ್ಲ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಫೋಟೋ
ಎಂಎನ್‌ಜಿ- ಜುಲೈ 12- ಬುಕ್ ರಿಲೀಸ್